ವಿಶ್ವಕಪ್: ಫ್ರಾನ್ಸ್ ಶುಭಾರಂಭ

Update: 2018-06-16 12:09 GMT

ಕಝಾನ್, ಜೂ.16: ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಸಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ ಫ್ರಾನ್ಸ್ ತಂಡ ಆಸ್ಟ್ರೇಲಿಯ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಫ್ರಾನ್ಸ್ ಪರ ಆ್ಯಂಟೋನಿ ಗ್ರಿಝ್‌ಮನ್(58ನೇ ನಿಮಿಷ) ಹಾಗೂ ಪಾಲ್ ಪೊಗ್ಬಾ(81ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ನೆರವಾದರು. ಆಸ್ಟ್ರೇಲಿಯದ ಪರ ಜೆಡಿನಾಕ್ 62ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಪೈಪೋಟಿಯಿಂದ ಕೂಡಿದ್ದ ಪಂದ್ಯ ಮೊದಲಾರ್ಧದಲ್ಲಿ ಗೋಲು ರಹಿತವಾಗಿ ಅಂತ್ಯಗೊಂಡಿತ್ತು. ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿದ ಗ್ರಿಝ್‌ಮನ್ ಫ್ರಾನ್ಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 62ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾದ ಆಸ್ಟ್ರೇಲಿಯದ ಜೆಡಿನಾರ್ 1-1 ರಿಂದ ಸಮಬಲ ಸಾಧಿಸಿದರು.

81ನೇ ನಿಮಿಷದಲ್ಲಿ ಗೋಲು ಬಾರಿಸಿದ ಪೊಗ್ಬಾ ಫ್ರಾನ್ಸ್‌ಗೆ 2-1 ಅಂತರದ ರೋಚಕ ಗೆಲುವು ತಂದುಕೊಟ್ಟರು. ಫ್ರಾನ್ಸ್ ಪರ ಗೋಲು ಖಾತೆ ತೆರೆದ ಆ್ಯಂಟೊನಿ ಗ್ರಿಝ್‌ಮನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News