×
Ad

ಪ್ರತಿ ಜಿಲ್ಲೆಗೊಂದು ಆಯುಷ್ ಆಸ್ಪತ್ರೆ: ಶ್ರೀಪಾದ ನಾಯಕ್

Update: 2018-06-16 19:24 IST

ಉಡುಪಿ, ಜೂ.16: ದೇಶದ 640 ಜಿಲ್ಲೆಗಳಿಗೂ ಆಯುಷ್ ಆಸ್ಪತ್ರೆ ತಲಾ 14 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿದ್ದು, ಈಗಾಗಲೇ 100 ಆಸ್ಪತ್ರೆ ಗಳು ಕಾರ್ಯಾರಂಭಿಸಿವೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ನಾಯಕ್ ತಿಳಿಸಿದ್ದಾರೆ.

ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯಲಿದ್ದು 50,000ಕ್ಕೂ ಅಧಿಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯಲಿದ್ದು 50,000ಕ್ಕೂ ಅಧಿಕಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭ ಯೋಗ ಕ್ಷೇತ್ರದ ಇಬ್ಬರು ದೇಶೀಯ ಸಾಧಕರಿಗೆ ಹಾಗೂ ಇಬ್ಬರು ವಿದೇಶಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದ ಅವರು, ಆಯುಷ್ ಮಿಷನ್ ಮೂಲಕ ಆಯುಷ್ ಗ್ರಾಮ ರೂಪುಗೊಳ್ಳಲಿದೆ ಎಂದರು.

ಪ್ರತಿ ರಾಜ್ಯದ ನಗರಗಳಲ್ಲಿ 100 ಯೋಗ ಪಾರ್ಕ್ ಆರಂಭಗೊಂಡಿದ್ದು, ಮುಂದಿನ ವರ್ಷ 150 ಯೋಗ ಪಾರ್ಕ್ ಪ್ರಾರಂಭಗೊಳ್ಳಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News