ಅಡ್ಡೂರು: ಶ್ರಮದಾನ ಮೂಲಕ ಈದುಲ್ ಫಿತ್ರ್ ಆಚರಿಸಿದ ಯುವಕರ ತಂಡ
Update: 2018-06-16 19:46 IST
ಮಂಗಳೂರು, ಜೂ. 16: ಅಡ್ಡೂರಿನ 'ಹೆಲ್ಪ್ ಲೈನ್ ಮಜ್ಜೂಟ್ಟಿ' ಯುವಕರ ತಂಡ ಶ್ರಮದಾನ ಮಾಡುವ ಮೂಲಕ ಈದುಲ್ ಫಿತ್ರ್ ಆಚರಿಸಿದರು.
ನಿರಂತರವಾಗಿ ಸುರಿದ ಮಳೆಯಿಂದ ಮಣ್ಣು ಕುಸಿದು ಇಲ್ಲಿನ ರಸ್ತೆ ಕೆಸರಾಗಿದ್ದು, ಸಂಚಾರಕ್ಕೆ ಕಷ್ಟಕರವಾಗಿತ್ತು. ಇದರಿಂದ ವಾಹನ ಚಲಿಸುವಾಗ ಅವಘಡ ಸಂಭವಿಸಬಾರದು ಎಂದು ಯುವಕರ ತಂಡ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿರುವುದಾಗಿ ಇರ್ಝಾನ್ ಅಡ್ಡೂರು ತಿಳಿಸಿದ್ದಾರೆ.
ಯುವಕರ ಈ ಶ್ರಮವು ಸ್ಥಳೀಯರ ಪ್ರಶಂಸೆಗೆ ಪಾತ್ರವಾಯಿತು.