ಕೊಂಚಾಡಿ: ದ್ವಿಚಕ್ರ ವಾಹನ ಕಳವು
Update: 2018-06-16 22:05 IST
ಮಂಗಳೂರು, ಜೂ.16: ನಗರದ ಕೊಂಚಾಡಿ ದೇರೆಬೈಲ್‌ನ ಸಾನಿಧ್ಯ ನಿಲಯ ನಿವಾಸಿ ದಯಾನಂದ ಸಾಲ್ಯಾನ್ ಎಂಬವರಿಗೆ ಸೇರಿದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.13ರಂದು ರಾತ್ರಿ 9:30ಕ್ಕೆ ತನ್ನ ಮನೆಯ ಕಾಂಪೌಂಡ್ ಒಳಗಡೆ ಬೈಕ್ ನಿಲ್ಲಿಸಿದ್ದು ಮರುದಿನ ಬೆಳಗ್ಗೆ 6:30ಕ್ಕೆ ನೋಡಿದಾಗ ದ್ವಿಚಕ್ರ ಕಳವಾಗಿತ್ತು. ಇದರ ವೌಲ್ಯ 6,000ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.