×
Ad

ಬೆಳ್ತಂಗಡಿ: ಶಾಂತಿವನಕ್ಕೆ ಆಗಮಿಸಿದ ಸಿದ್ದರಾಮಯ್ಯ

Update: 2018-06-16 22:13 IST

ಬೆಳ್ತಂಗಡಿ, ಜೂ. 16: ಸಿದ್ದರಾಮಯ್ಯ ಅವರು ಶನಿವಾರ ರಾತ್ರಿ ಬೆಳ್ತಂಗಡಿಯ ಶಾಂತಿವನಕ್ಕೆ ಆಗಮಿಸಿದರು.

ಶಾಂತಿವನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ ಸಂಸ್ಥೆಯ ಪರವಾಗಿ ಸ್ವಾಗತಿಸಿದರು. ಯೋಗ ಮತ್ತು ಚಿಕಿತ್ಸಾಲಯಕ್ಕೆ ಆಗಮಿಸಿದಾಗ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರು ಪಕ್ಷದ  ಪರವಾಗಿ ಸ್ವಾಗತಿಸಿದರು.

ಮಾಜಿ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಕಾಂಗ್ರೆಸ್ ಮುಖಂಡರಾದ ನಾಭಿರಾಜ್, ಪಿತಾಂಬರ ಹೆರಾಜೆ, ಶ್ರೀನಿವಾಸ್ ವಿ.ಕಿಣಿ, ಚಂದನ್ ಕಾಮತ್, ಶೇಖರ ಕುಕ್ಕೇಡಿ, ದರಣೇಂದ್ರ ಕುಮಾರ್, ವಸಂತ ಬಿ.ಕೆ., ಸುಂದರ ಗೌಡ,  ಚಂದು ಎಲ್  ಹಾಗೂ ತಾಲೂಕಿನ ಕಾಂಗ್ರೆಸ್ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News