ಹೊಳೆಗೆ ಹಾರಿ ಯುವಕ ಮೃತ್ಯು
Update: 2018-06-16 22:29 IST
ಸುಳ್ಯ, ಜೂ. 16: ಮಾನಸಿಕವಾಗಿ ಅಸ್ವಸ್ಥಗೊಂಡ ಯುವಕನೋರ್ವ ಹೊಳೆಗೆ ಹಾರಿ ಸಾವನ್ನಪ್ಪಿದ ಘಟನೆ ಶನಿವಾರ ಅರಂತೋಡು ಉಳುವಾರಿನಲ್ಲಿ ನಡೆದಿದೆ.
ಅರಂತೋಡು ಉಳುವಾರಿನ ಗೋಪಾಲ ಗೌಡರ ಪುತ್ರ ದೇವಿಪ್ರಸಾದ್ (29) ಮೃತರು. ಈತ ಮಾನಸಿಕ ಅಸ್ವಸ್ಥಗೊಂಡಿದ್ದು, ಶನಿವಾರ ಅರಂತೋಡು ಬಳಿಯ ಪಯಸ್ವಿನಿ ಹೊಳೆಗೆ ಹಾರಿ ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ, ಸಹೋದರನ್ನು ಅಗಲಿದ್ದಾರೆ.