×
Ad

ಸ್ಟೀಲ್, ಅಲ್ಯುಮೀನಿಯಂ ಮೇಲೆ ತೆರಿಗೆ ವಿಧಿಸಿದ ಅಮೆರಿಕ; ಭಾರತದಿಂದ ತಿರುಗೇಟು

Update: 2018-06-16 22:30 IST

ಹೊಸದಿಲ್ಲಿ, ಜೂನ.16: ಸ್ಟೀಲ್ ಹಾಗೂ ಅಲ್ಯುಮಿನಿಯಂನ ಕೆಲವು ಉತ್ಪದಾನೆಗಳ ಆಮದಿನ ಮೇಲೆ ಸುಂಕ ವಿಧಿಸುವ ಅಮೆರಿಕದ ನಿರ್ಧಾರದಿಂದ ಅಸಮಾಧಾನಗೊಂಡಿರುವ ಭಾರತ ಅಮೆರಿಕದಿಂದ ಆಮದು ಮಾಡಮಾಗುವ ಮೂವತ್ತಕ್ಕೂ ಅಧಿಕ ಉತ್ಪನ್ನಗಳ ಮೇಲಿನ ರಿಯಾಯಿತಿಯನ್ನು ತೆಗೆದು ಹಾಕಲು ನಿರ್ಧರಿಸಿದೆ.

ಅಮೆರಿಕದ ಕ್ರಮದಿಂದ ತನ್ನ ವ್ಯಾಪಾರದಲ್ಲಿ ಉಂಟಾಗುವ ನಷ್ಟಕ್ಕೆ ಸಮಾನವಾದ ಮೊತ್ತದ ರಿಯಾಯಿತಿಯನ್ನು ತೆಗೆದುಹಾಕಲಾಗುವುದು ಎಂದು ಭಾರತವು ಜೂನ್ 14ರಂದು ವಿಶ್ವ ವ್ಯಾಪಾರ ಸಂಸ್ಥೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿತ್ತು.

ಮೋಟಾರ್ ಸೈಕಲ್‌ಗಳು, ಕೆಲವು ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳು, ಬೋರಿಕ್ ಆ್ಯಸಿಡ್ ಹಾಗೂ ಧಾನ್ಯಗಳು ಸುಂಕದ ವ್ಯಾಪ್ತಿಗೆ ಬರಲಿವೆ. ಸುದ್ದಿ ಸಂಸ್ಥೆಯ ಪ್ರಕಾರ, ಆಮದು ಸುಂಕವನ್ನು ಹೆಚ್ಚಿಸುವ ಅಮೆರಿಕದ ನಿರ್ಧಾರದಿಂದ 241 ಮಿಲಿಯನ್ ಡಾಲರ್ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಈ ಪೈಕಿ 198.6 ಮಿಲಿಯನ್ ಡಾಲರ್ ಸ್ಟೀಲ್ ಹಾಗೂ 42.4 ಮಿಲಿಯನ್ ಡಾಲರ್ ಮೊತ್ತದ ಅಲ್ಯುಮಿನಿಯಂ ಉತ್ಪನ್ನಗಳಾಗಿವೆ. ಭಾರತವು ಅಮೆರಿಕಕ್ಕೆ ಕೇವಲ ಶೇ.4 ಸ್ಟೀಲ್ ಹಾಗೂ ಶೇ.2 ಅಲ್ಯುಮಿನಿಯಂ ರಫ್ತು ಮಾಡುತ್ತದೆ. ಈ ವರ್ಷದ ಆರಂಭದಲ್ಲಿ ಅಮೆರಿಕವು ಕೆನಡ ಮತ್ತು ಮೆಕ್ಸಿಕೊವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಿಂದ ಆಮದು ಮಾಡಲಾಗುವ ಸ್ಟೀಲ್ ಮತ್ತು ಅಲ್ಯುಮಿನಿಯಂ ಮೇಲೆ ಸುಂಕವನ್ನು ವಿಧಿಸಿತ್ತು. ಈ ನಿರ್ಧಾರವು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಅಮೆರಿಕ ಫಸ್ಟ್ ನೀತಿಯ ಭಾಗವಾಗಿತ್ತು. ಟ್ರಂಪ್‌ನ ಈ ನಿರ್ಧಾರವು ಜಾಗತಿಕ ವ್ಯಾಪಾರ ಯುದ್ಧ ಆರಂಭವಾಗುವ ಸೂಚನೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News