ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂದರ್ಥವೇ: ಮಮತಾ ಬ್ಯಾನರ್ಜಿ
ಹೊಸದಿಲ್ಲಿ, ಜೂ.16: ನಾನು ಮುಸ್ಲಿಮ್ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದೇನೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಹಿಂದೂಗಳನ್ನು ಪ್ರೀತಿಸುವುದು ಎಂದರೆ ಮುಸ್ಲಿಮರನ್ನು ದ್ವೇಷಿಸುವುದು ಎಂದರ್ಥವೇ. ನಾನು ಎಲ್ಲಾ ಧರ್ಮ, ಸಮುದಾಯದ ಜನರನ್ನೂ ಪ್ರೀತಿಸಿ ಗೌರವಿಸುತ್ತೇನೆ. ಈ ದೇಶ ಎಲ್ಲರಿಗೂ ಸೇರಿದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತಾದ ‘ರೆಡ್‌ರೋಡ್’ನಲ್ಲಿ ನಡೆದ ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ನೀತಿ ಆಯೋಗದ ಸಭೆಯನ್ನು ಮೊದಲು ಜೂನ್ 16ರಂದು ಆಯೋಜಿಸಲಾಗಿತ್ತು. ಆದರೆ ತಾನು ಆಕ್ಷೇಪ ಸಲ್ಲಿಸಿದ ಬಳಿಕ ಇದನ್ನು ಜೂನ್ 17ಕ್ಕೆ ಮುಂದೂಡಲಾಗಿದೆ ಎಂದ ಮಮತಾ, ಜೂನ್ 16ರಂದು ಈದ್ ಹಬ್ಬ ಆಚರಿಸಲಾಗುತ್ತದೆ ಎಂಬುದು ಕೇಂದ್ರ ಸರಕಾರದ ಅಧಿಕಾರಿಗಳಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ನೀತಿ ಆಯೋಗದ ಸಭೆಯನ್ನು ಜೂನ್ 16ರಂದು ನಡೆಸಿದರೆ ತಮಗೆ ಭಾಗವಹಿಸಲು ಸಾಧ್ಯವಾಗದು ಎಂದು ಬ್ಯಾನರ್ಜಿ ಸಹಿತ ಇತರ ಹಲವು ಮುಖ್ಯಮಂತ್ರಿಗಳು ತಿಳಿಸಿದ್ದ ಹಿನ್ನೆಲೆಯಲ್ಲಿ ಸಭೆಯನ್ನು ಜೂನ್ 17ಕ್ಕೆ ಮುಂದೂಡಲಾಗಿದೆ.