ಮಂಗಳೂರು: ವಿಮಾನ ಹಾರಾಟದಲ್ಲಿ ವ್ಯತ್ಯಯ
Update: 2018-06-16 22:38 IST
ಮಂಗಳೂರು, ಜೂ.16: ಹವಾಮಾನ ವೈಪರೀತ್ಯದಿಂದಾಗಿ ಶನಿವಾರ ಮಂಗಳೂರಿನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಶನಿವಾರ ಬೆಳಗ್ಗೆ ದುಬೈನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನ 45 ನಿಮಿಷ ವಿಳಂಬವಾಗಿ ಲ್ಯಾಂಡ್ ಆಗಿದೆ.
ದುಬೈನಿಂದ ಆಗಮಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8:30ರ ವೇಳೆಗೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಇದ್ದುದರಿಂದ 9:15ಕ್ಕೆ ಇಳಿದಿದೆ.
ಮಳೆಗಾಲದ ಸಂದರ್ಭ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಸಮಸ್ಯೆಗಳು ಎದುರಾದ ತಕಷಣ ಸೂಕ್ತ ಎಚ್ಚರಿಕೆ ವಹಿಸಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.