ನಿಧನ: ದೊಂಬೆ ಶಿವರಾಮಯ್ಯ
Update: 2018-06-16 22:42 IST
ಉಡುಪಿ, ಜೂ.16:ಹಿರಿಯ ಯಕ್ಷಗಾನ ಸಂಘಟಕ ದೊಂಬೆ ಶಿವರಾಮಯ್ಯ (74) ಹೃದಯಾಘಾತದಿಂದ ತಮ್ಮ ಸ್ವಗೃಹ ಸಾಗರದ ಸಮೀಪ ದೊಂಬೆಯಲ್ಲಿ ನಿಧನಹೊಂದಿದರು. ಅವರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಸಾಗರದ ಸಿರಿವಂತೆಯಲ್ಲಿ ಶ್ರೀತ್ರಿಪುರಾಂತಕೇಶ್ವರ ಯಕ್ಷಗಾನ ಸಂಘಟನೆ ಸ್ಥಾಪಿಸಿ ನಿರಂತರ ನಾಲ್ಕೂವರೆ ದಶಕಗಳ ಕಾಲ ಯಕ್ಷಗಾನ ತಾಳಮದ್ದಲೆ ನಡೆಸುತ್ತಾ ಆ ಭಾಗದ ಕಲಾರಸಿಕರಿಗೆ ಶೇಣಿ, ಸಾಮಗ, ಪೆರ್ಲ, ಆನಂದ ಮಾಸ್ಟರ್, ಎಂ.ಆರ್.ಲಕ್ಷ್ಮೀನಾರಾಯಣ, ಡಾ.ಜೋಶಿಯಂಥ ಶ್ರೇಷ್ಠ ಅರ್ಥ ಧಾರಿಗಳ ಕೂಟವನ್ನು ಕೇಳಿ ಆನಂದಿಸುವ ಅವಕಾಶವನ್ನು ದೊಂಬೆ ಕಲ್ಪಿಸಿದ್ದರು.
ಕೇವಲ ಯಕ್ಷಗಾನ ಸಂಘಟನೆ ಮಾತ್ರವಲ್ಲದೆ ನಾಟಕ ಕಲಾವಿದರೂ ಆಗಿದ್ದ ಇವರು ಕೆಲವಾರು ಧಾರಾವಾಹಿಗಳಲ್ಲೂ ನಟಿಸಿದ್ದರು. ದೊಂಬೆ ಶಿವರಾಮಯ್ಯ ನಿಧನಕ್ಕೆ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.