×
Ad

ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿಗ್ ಡೇಟಾ ಎನಾಲಿಟಿಕ್ಸ್ ಡಿಪ್ಲೋಮಾ ಕೋರ್ಸ್

Update: 2018-06-16 23:28 IST

ಮಂಗಳೂರು, ಜೂ.16: ವಿಶ್ವದಾದ್ಯಂತ ಉದ್ಯೋಗ ಮಾರುಕಟ್ಟೆಯಲ್ಲಿ ಡೇಟಾ ವಿಶ್ಲೇಷಕರಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ನಗರದ ಸಂತ ಆಗ್ನೆಸ್ ಕಾಲೇಜು ವತಿಯಿಂದ 2018 ಜುಲೈ ಮೊದಲ ವಾರದಿಂದ ಬಿಗ್ ಡೇಟಾ ಎನಾಲಿಟಿಕ್ಸ್ ಎಂಬ ವಾರಾಂತ್ಯದ ಡಿಪ್ಲೋಮಾ ಕೋರ್ಸನ್ನು ಸಾದರಪಡಿಸುತ್ತಿದೆ.

120 ಘಂಟೆಯ ಕಲಿಕೆಯ ಅವಧಿಯ ಈ ಕೋರ್ಸನ್ನು ಅನುಭವಿ ಬೋಧಕ ವರ್ಗದಿಂದ ತರಗತಿ ನಡೆಸಲ್ಪಡುತ್ತದೆ. ವಿಜ್ಞಾನ ,ತಂತ್ರಜ್ಞಾನ ಮತ್ತು ಕಾರ್ಪೋರೇಟ್ ಕ್ಷೇತ್ರಗಳಲ್ಲಿ ಅನೇಕಾ ಉದ್ಯೋಗವಕಾಶಗಳು ಹಾಗೂ ವೃತ್ತಿ ಜೇವನದ ಪ್ರಗತಿಗಾಗಿ ಅವಕಾಶಗಳನ್ನು ನೀಡುತ್ತದೆ.

ಕಂಪ್ಯೂಟರ್‌ನ ಮೂಲಭೂತ ಜ್ಞಾನ ಹೊಂದಿರುವ ಉದ್ಯೋಗಸ್ಥ ಮತ್ತು ನಿರುದ್ಯೋಗಿ ಗಳು ಈ ಕೋರ್ಸಿಗೆ ಸೇರಬಹುದಾಗಿದೆ. ಆಸಕ್ತರು ಕಾರ್ಯಕ್ರಮದ ಸಂಯೋಜಕಿ ಶುಭರೇಖ ಸಂತ ಆ್ಯಗ್ನೆಸ್ ಕಾಲೇಜು ಮಂಗಳೂರು ಇವರನ್ನು ದೂರವಾಣಿ 0824-2218414 ಅಥವಾ 9448549122 ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News