×
Ad

ಕರ್ಣಾಟಕ ಬ್ಯಾಂಕ್‌ನಿಂದ ಕೆಬಿಎಲ್ ಡೆಪಾಸಿಟ್ ಓನ್ಲಿ ಕಾರ್ಡ್

Update: 2018-06-16 23:37 IST

ಮಂಗಳೂರು, ಜೂ.16: ತನ್ನ ಡಿಜಿಟಲ್ ಅಭಿಯಾನದ ಭಾಗವಾಗಿ ಕರ್ಣಾಟಕ ಬ್ಯಾಂಕ್ ಕೆಬಿಎಲ್ ಡಿಪಾಸಿಟ್ ಓನ್ಲಿ ಕಾರ್ಡನ್ನು ಪರಿಚಯಿಸಿದೆ. ಈ ಕಾರ್ಡ್ ಮೂಲಕ ಗ್ರಾಹಕರು ಬ್ಯಾಂಕ್‌ನ 24 ಗಂಟೆಗಳು ತೆರೆದಿರುವ ಇ-ಲಾಬಿಯಲ್ಲಿ ವ್ಯವಹಾರನ ನಡೆಸಬಹುದಾಗಿದೆ.

ಈ ಕಾರ್ಡ್ ಪ್ರಮುಖವಾಗಿ ಚಾಲ್ತಿ ಹಾಗೂ ಓವರ್ ಡ್ರಾಫ್ಟ್ ಗ್ರಾಹಕರಿಗಾಗಿ ರಚಿಸಲಾಗಿದ್ದು ಈ ಕಾರ್ಡ್ ಬಳಸಿ ಗ್ರಾಹಕರು ಹೆಚ್ಚಿನ ಮೊತ್ತವನ್ನೂ ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಬಹುದಾಗಿದೆ. ಆದರೆ ಈ ಕಾರ್ಡನ್ನು ಕೇವಲ ಠೇವಣಿಯಿಡಬಹುದಾಗಿದೆಯೇ ಹೊರತು ಹಣ ಪಡೆಯುವಂತಿಲ್ಲ. ಈ ಕಾರ್ಡ್ ಮೂಲಕ ದಿನಕ್ಕೆ ಹತ್ತು ಲಕ್ಷ ರೂ. ಠೇವಣಿಯಿಡಬಹುದಾಗಿದೆ.

ಈ ವಿಶಿಷ್ಟ ಕಾರ್ಡ್‌ವಿಶೇಷವಾಗಿ ಬ್ಯಾಂಕ್‌ನ ಕೊರ್ಪೊರೇಟ್ ಹಾಗೂ ವ್ಯಾಪಾರ ನಡೆಸುವವರು ತಮ್ಮ ಹಣವನ್ನು ತಮ್ಮ ಖಾತೆಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಡೆಪಾಸಿಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್ ತಿಳಿಸಿದ್ದಾರೆ.

ಕರೆನ್ಸಿ ಚೆಸ್ಟ್ ತೆರೆದ ಕರ್ಣಾಟಕ ಬ್ಯಾಂಕ್ : 

ಇಲ್ಲಿದ ಡೊಂಗರಕೇರಿಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನ ಕರೆನ್ಸಿ ಚೆಸ್ಟನ್ನು ತೆರೆಯಿತು. ಬ್ಯಾಂಕ್‌ನ ಮುಖ್ಯಸ್ಥ ಪಿ. ಜಯರಾಮ ಭಟ್ ನೂತನ ಕರೆನ್ಸಿ ಚೆಸ್ಟನ್ನು ಉದ್ಘಾಟಿಸಿದರು.

ಈ ವೇಳೆ ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್, ಮುಖ್ಯ ಆಪರೇಟಿಂಗ್ ಅಧಿಕಾರಿ ರಾಘವೇಂದ್ರ ಭಟ್, ಮುಖ್ಯ ವಿತ್ತೀಯ ಅಧಿಕಾರಿ ಬಾಲಚಂದ್ರ ವೈ.ವಿ, ಡಿಜಿಎಂ ವಿನಯ್ ಭಟ್, ಎಜಿಎಂ ಮಂಗಳೂರು ರಮೇಶ್ ಭಟ್, ಹಿರಿಯ ಪ್ರಬಂಧಕ ಹರೀಶ್ ಪ್ರಭು, ಹಾಗೂ ಬ್ಯಾಂಕ್‌ನ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News