×
Ad

ರೋಟರಿ ಮಂಗಳೂರು ಸಿಟಿ ಸಂಸ್ಥೆಗೆ ಅಂತಾರಾಷ್ಟ್ರೀಯ ಸನದು ಪ್ರದಾನ

Update: 2018-06-17 22:29 IST

ಮಂಗಳೂರು, ಜೂ. 17: ರೋಟರಿ ಸಂಸ್ಥೆಯು ಶತಮಾನ ಪೂರೈಸಿದ ಪ್ರಪ್ರಥಮ ಸ್ವಯಂಪ್ರೇರಿತ ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾಗಿದ್ದು, ಇದು ಮನುಕುಲಕ್ಕೆ ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದೆ. ಅದಕ್ಕನುಗುಣವಾಗಿ ಸದಸ್ಯರು ರೋಟರಿ ಅಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಶ್ರಮಿಸಬೇಕು ಎಂದು ರೋಟರಿ ಜಿಲ್ಲಾ 3181 ರ ಗವರ್ನರ್ ರೋ.ಎಂ.ಎಂ. ಚೆಂಗಪ್ಪಕರೆ ನೀಡಿದ್ದಾರೆ.

ನೂತನವಾಗಿ ಸ್ಥಾಪಿಸಲ್ಪಟ್ಟ ರೋಟರಿ ಮಂಗಳೂರು ಸಿಟಿ ಸಂಸ್ಥೆಯನ್ನು ನಗರದ ಖಾಸಗಿ ಹೋಟೇಲ್‌ನ ಸಭಾಂಗಣದಲ್ಲಿ ಶನಿವಾರ ಜರುಗಿದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಾಪಾನಾಧ್ಯಕ್ಷ ರೋ.ಡಾ.ರಂಜನ್ ಅಧ್ಯಕ್ಷತೆ ವಹಿಸಿದ್ದರು. ನೂತನ ಸಂಸ್ಥೆಗೆ ಅಮೆರಿಕಾ ಮೂಲದ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ಮಾನ್ಯತೆ ನೀಡಿ ಪ್ರಾಯೋಜಿಸಿದ ಸನದು, ಪ್ರಮಾಣ ಪತ್ರವನ್ನು ಸ್ಥಾಪನಾಧ್ಯಕ್ಷ ಡಾ.ರಂಜನ್‌ರಿಗೆ ಹಸ್ತಾಂತರಿಸಲಾಯಿತು.

ಬೋಳಾರ ದ.ಕ. ಜಿಪಂ ಸರಕಾರಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು ಮತ್ತು ಶಾಲೆಯ ಶೌಚಾಲಯ ನಿರ್ಮಾಣಕ್ಕಾಗಿ ಆಶ್ವಾಸನ ಪತ್ರವನ್ನು ಶಾಲಾ ಮುಖ್ಯ ಶಿಕ್ಷಕಿ ಮೀನಾಕ್ಷಿಗೆ ಹಸ್ತಾಂತರಿಸಲಾಯಿತು.

ರೋಟರಿ ಜಿಲ್ಲಾ ಸಲಹೆಗಾರ ಸೂರ್ಯಪ್ರಕಾಶ್ ಭಟ್ ಮುಖ್ಯ ಅತಿಥಿಯಾಗಿದ್ದರು. ರೋಟರಿ ಜಿಲ್ಲಾ ವಿಸ್ತರಣಾ ಸಮಿತಿಯ ಅಧ್ಯಕ್ಷ ಡಾ. ಅರವಿಂದ್ ಭಟ್ಟ ಅಭಿನಂದನಾ ಭಾಷಣ ಮಾಡಿದರು. ಸಹಾಯಕ ಗವರ್ನರ್ ರಾಜೇಂದ್ರ ಕಲ್ಬಾವಿ ಸಂಸ್ಥೆಯ ಪ್ರಪ್ರಥಮ ಸಾಪ್ತಾಹಿಕ ವಾರ್ತಾ ಪತ್ರಿಕೆ ‘ಸಿಟಿ ಬಿಟ್ಸ್ ಆ್ಯಂಡ್ ಬೈಟ್ಸ್’ನ್ನು ಬಿಡುಗಡೆಗೊಳಿಸಿದರು. ಸುಮಿತ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಶಾಂತ್ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News