ಬಂಟ್ವಾಳ: ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷ ರಾಗಿ ಜಯಲಕ್ಮೀ ಭುವನೇಶ್
Update: 2018-06-17 22:59 IST
ಬಂಟ್ವಾಳ, ಜೂ. 17: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿ ಇದರ ನೂತನ ಅಧ್ಯಕ್ಷ ರಾಗಿ ಜಯಲಕ್ಮೀ ಭುವನೇಶ್ ಅವರು ಅವಿರೋಧವಾಗಿ ವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ರಾಗಿ ರಮಣಿ ಮೋಹನ್ ತುಂಬೆ, ಕಾರ್ಯದರ್ಶಿ ಯಾಗಿ ಚಂದ್ರಾವತಿ ಕಾಮಾಜೆ, ಜತೆ ಕಾರ್ಯದರ್ಶಿ ಯಾಗಿ ಅಮಿತ ಪಚ್ಚಿನಡ್ಕ, ಕೋಶಾಧಿಕಾರಿ ಯಾಗಿ ರೇವತಿ ಬಡಗಬೆಳ್ಳೂರು ಅಯ್ಕೆಯಾಗಿದ್ದಾರೆ.
ಬ್ರಹ್ಮ ಶ್ರೀನಾರಾಯಣ ಗುರು ಮಂದಿರ ಬಿಸಿರೋಡು ಇಲ್ಲಿ ಭಾರತಿ ಕುಂದರ್ ಅವರ ಅಧ್ಯಕ್ಷ ತೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯ ಲ್ಲಿ ಈ ಆಯ್ಕೆ ನಡೆಯಿತು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.