ದ.ಕ. ಜಿಲ್ಲೆ: ಚುನಾವಣೆ ನಿಮಿತ್ತ ವರ್ಗಾವಣೆ ಗೊಂಡಿದ್ದ ಅಧಿಕಾರಿಗಳ ಮರು ನಿಯೋಜನೆ
Update: 2018-06-17 23:18 IST
ಮಂಗಳೂರು, ಜೂ.17: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ನೀತಿ ಸಂಹಿತಿಯ ಪ್ರಕಾರ ವರ್ಗಾವಣೆಗೊಂಡಿದ್ದ ರಾಜ್ಯದ 187 ತಹಶೀಲ್ದಾರ್ ವೃಂದದ ಅಧಿಕಾರಿಗಳು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಿಗೆ ಮರು ನಿಯುಕ್ತಿಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿಗೆ ಗುರುಪ್ರಸಾದ್ ,ಬಂಟ್ವಾಳ ತಾಲೂಕು ತಹಶೀಲ್ದಾರರಾಗಿ ಪುರಂದರ ಹೆಗ್ಡ ಹಾಗೂ ಕಡಬ ತಹಶೀಲ್ದಾರರಾಗಿ ಜಾನ್ ಪ್ರಕಾಶ್ ನೇಮಕಗೊಂಡಿದ್ದಾರೆ.
ಮಂಗಳೂರು ನಗರ ಮಾಪನ ಕಚೇರಿಗೆ ಹೆಚ್.ಕೆ.ತಿಪ್ಪೇ ಸ್ವಾಮಿ,ಬ್ರಹ್ಮಾವರದ ಗ್ರೇಡ್ 2 ತಹಶೀಲ್ದಾರ್ ಭಾರತಿ,ಮೂಡಿಗೆರೆಯ ತಹಶೀಲ್ದಾರ್ ಎ.ಎಂ.ಖಾನ್ ಮಂಗಳೂರು ಸಿಎಂಸಿ ಗೆ ನೇಮಕಗೊಳಿಸಿ ಸರಕಾರದ ಕಂದಾಯ ಇಲಾಖೆ ಆದೇಶ ನೀಡಿದೆ.