ಆತೂರು: ಬ್ಲಾಸಮ್ ಡ್ರೀಮ್ಸ್ ಸ್ಕೂಲ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

Update: 2018-06-17 18:27 GMT

ಆತೂರು, ಜೂ. 17: ಆತೂರಿನ ಗೋಳಿತ್ತಡಿಯಲ್ಲಿರುವ 'ಬ್ಲಾಸಮ್ ಡ್ರೀಮ್ಸ್ ಸ್ಕೂಲ್ ಆಫ್ ಎಕ್ಸಲೆನ್ಸ್' ಶಾಲೆಯನ್ನು ಹಿರಿಯ ವಿದ್ವಾಂಸರಾದ ಶಾಹ್ ಮುಸ್ಲಿಯಾರ್ ಅವರು ರವಿವಾರ ಉದ್ಘಾಟಿಸಿದರು. 

'ಟಿಆರ್ ಎಫ್' ಮಂಗಳೂರು ಸಲಹೆಗಾರ ರಫೀಕ್ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ‌, ಇದೊಂದು ಐತಿಹಾಸಿಕ ದಿನ, ಮರಳಿ ಬಾ ಶಾಲೆಯ ಮುಖಾಂತರ ಆರಂಭವಾದ ಈ ವಿದ್ಯಾ ಸಂಸ್ಥೆಯು ಇಂದು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಇಂದು ಆತೂರು ಪರಿಸರವು ಶಿಕ್ಷಣದ ಹಬ್ ಆಗಿ ಬೆಳೆದಿದೆ. ಎಲ್ಲಾ ವರ್ಗದ ಜನರಿಗೆ ಸಮಾನ ಶಿಕ್ಷಣ‌ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇನ್ನೂ ಎತ್ತರಕ್ಕೆ ‌ಬೆಳೆಯಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಎಂಪವರ್ ಇಂಡಿಯಾ ಫೌಂಡೇಶನ್ ನ ರಾಜ್ಯ ಸಂಚಾಲಕ ಅಯ್ಯೂಬ್ ಅಗ್ನಾಡಿ ಇಚ್ಛಾಶಕ್ತಿ ಮತ್ತು ಸಂಘ ಶಕ್ತಿಯಿಂದ ಸಾಧನೆ ಮಾಡಬಹುದು ಎಂದು ಈ ಸಂಸ್ಥೆಯು ತೋರಿಸಿಕೊಟ್ಟಿದೆ. ಈ ಸಂಸ್ಥೆಯು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.

 ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬಿ.ಕೆ. ಮಾತನಾಡಿ, ನಮ್ಮೊಂದಿಗೆ ಇದುವರೆಗೆ ಸಹಕರಿಸಿದ ಊರ, ಪರವೂರ‌ ಎಲ್ಲಾ ಹಿತೈಷಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭ ಇಕ್ಬಾಲ್ ಹಲ್ಯಾರ, ಹಾಜಿ ಆದಂ .ಪಿ, ಅಬ್ದುಲ್ಲಾ ಹಾಜಿ ಕುಂಡಾಜೆ, ಅಶ್ರಫ್ ಡಿಎ, ನಝೀರ್ ಕೋಡಿಂಬಾಡಿ, ಅಝಾದ್ ಕೆ.ಎನ್. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಆತೂರು, ಸಮದ್ ಕುಂತೂರ್  ಉಪಸ್ಥಿತರಿದ್ದರು.

ಸದಕತುಲ್ಲಾ ಸ್ವಾಗತಿಸಿ, ಖಾದರ್ ಬಿ.ಎಸ್  ವಂದಿಸಿದರು. ಹಾಜಿ ಹುಸೈನ್ ಸಿರಾಜ್ ಕಾರ್ಯವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News