×
Ad

​ಹುಸೇನಬ್ಬ ಕೊಲೆ ಪ್ರಕರಣ: ಸಿಐಡಿ ತನಿಖೆ ಆರಂಭ

Update: 2018-06-18 22:02 IST

ಉಡುಪಿ, ಜೂ.18: ಪೆರ್ಡೂರು ಸಮೀಪ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ (62) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಆರಂಭಗೊಂಡಿದೆ.

ಜೂ.17ರಂದು ರಾತ್ರಿ ಉಡುಪಿಗೆ ಆಗಮಿಸಿದ ಸಿಐಡಿ ಡಿವೈಎಸ್ಪಿ ಚಂದ್ರ ಶೇಖರ್ ನೇತೃತ್ವದ ತಂಡವು ಪೊಲೀಸ್ ಇಲಾಖೆಯಿಂದ ಪ್ರಕರಣದ ಕಡತ ಗಳನ್ನು ಪಡೆದುಕೊಂಡಿದೆ.

ಇಂದು ತಂಡವು ಹಿರಿಯಡ್ಕ ಪೊಲೀಸ್ ಠಾಣೆ ಹಾಗೂ ಕೊಲೆ ನಡೆದ ಸ್ಥಳಗಳಿಗೆ ತೆರಳಿ ತನಿಖೆ ನಡೆಸಿರುವ ಬಗ್ಗೆ ಮೂಲ ಗಳಿಂದ ತಿಳಿದು ಬಂದಿದೆ. ಮುಂದೆ ಸಿಐಡಿ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳ ತಂಡ ಉಡುಪಿಗೆ ಆಗಮಿಸುವ ನಿರೀಕ್ಷೆ ಇದೆ.

ಹುಸೇನಬ್ಬರ ಸಾವು ಹಿರಿಯಡ್ಕ ಪೊಲೀಸರ ಜೀಪಿನಲ್ಲಿ ಆಗಿರುವುದರಿಂದ ಇದನ್ನು ಪೊಲೀಸ್ ಕಸ್ಟಡಿಯ ಸಾವು ಎಂದು ಪರಿಗಣಿಸಲಾಗಿದ್ದು, ಹೀಗಾಗಿ ಈ ಪ್ರಕರಣದ ತನಿಖೆಯು ಸ್ವಯಂ ಆಗಿ ಸಿಐಡಿಗೆ ವರ್ಗಾವಣೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News