ಎಂಐಟಿಯಲ್ಲಿ ಗಣಿತ ರಾಷ್ಟ್ರೀಯ ಸಮ್ಮೇಳನ
ಮಣಿಪಾಲ, ಜೂ.18: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಗಣಿತ ವಿಭಾಗವು ಜೂ.20ರಿಂದ 22ರವರೆಗೆ ಮೂರು ದಿನಗಳ ಕಾಲ ‘ಇಂಜಿನಿಯರಿಂಗ್‌ನಲ್ಲಿ ಗಣಿತ ಹಾಗೂ ಸಂಖ್ಯಾಶಾಸ್ತ್ರದ ಅನ್ವಯಿಸುವಿಕೆ’ ವಿಷಯದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಇಸ್ರೋ ಹಾಗೂ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ ಯ ಜಂಟಿ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ. ಸಮ್ಮೇಳನ ಗಣಿತ ಹಾಗೂ ಸಂಖ್ಯಾಶಾಸ್ತ್ರದ ಕುರಿತ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಿದೆ.
ಸಮ್ಮೇಳನದಲ್ಲಿ ಮೈಸೂರು ವಿವಿಯ ಡಾ.ಇ.ಸಂಪತ್‌ಕುಮಾರ್, ಕೊಟ್ಟಾಯಂ ಸಿಎಂಎಸ್ ಕಾಲೇಜಿನ ಗಣಿತ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಅಚ್ಯುತ ಕೃಷ್ಣಮೂರ್ತಿ, ಕೊಲ್ಕತ್ತಾ ಐಐಎಸ್‌ಇಆರ್‌ನ ಡಾ.ಅಶೋಕ ನಂದಾ, ರಾಜಸ್ಥಾನ ವೇದಾಂತ ಇಂಜಿನಿಯರಿಂಗ್ ಕಾಲೇಜಿನ ಡಾ.ಅರ್ಜುನ ಕುಮಾರ್ ಆರ್., ಎನ್‌ಐಟಿಕೆ ಸುರತ್ಕಲ್‌ನ ಡಾ.ಎ.ಕಂದಸ್ವಾಮಿ, ಡಾ.ಬಿ. ಆರ್. ಶಂಕರ್ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎಂಐಟಿಯ ಪ್ರಕಟಣೆ ತಿಳಿಸಿದೆ.