ಮೂಡುಬಿದಿರೆ: ಪ್ರಾಮಾಣಿಕತೆ ಮೆರೆದ ಪಂಚಾಯತ್ ಸದಸ್ಯ

Update: 2018-06-18 16:52 GMT

ಮೂಡುಬಿದಿರೆ, ಜೂ. 18: ಗ್ರಾ.ಪಂ. ಸದಸ್ಯರೋರ್ವರು ತನಗೆ ಸಿಕ್ಕಿದ ಪರ್ಸ್‌ವೊಂದನ್ನು ಪ್ರೆಸ್‌ಕ್ಲಬ್ ಮೂಲಕ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ಸೋಮವಾರ ಇರುವೈಲು ಗ್ರಾ.ಪಂ. ಸದಸ್ಯ ವಲೇರಿಯನ್ ಕುಟಿನ್ಹ ಎಂಬವರಿಗೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರ ಪರ್ಸ್ ಸಿಕ್ಕಿತ್ತು. ಕುಟಿನ್ಹ ಬಸ್ ನಿಲ್ದಾಣದಲ್ಲಿ ವಾರೀಸುದಾರರನ್ನು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಮೂಡುಬಿದಿರೆ ಪ್ರೆಸ್‌ಕ್ಲಬ್‌ಗೆ ಬಂದು ಪರ್ಸ್ ನೀಡಿ ವಾರೀಸುದಾರರನ್ನು ಪತ್ತೆ ಹಚ್ಚಿ ಪರ್ಸ್ ಮರಳಿಸುವಂತೆ ಪತ್ರಕರ್ತರನ್ನು ಕೋರಿಕೊಂಡರು.

ಪರ್ಸ್‌ನಲ್ಲಿ ಸಾವಿರಾರು ರೂ. ಹಣ, ಎಟಿಎಂ ಕಾರ್ಡ್, 1 ಮೊಬೈಲ್, ಆಸ್ಪತ್ರೆಯ ಕಾರ್ಡ್‌ಗಳಿದ್ದು, ಮೊಬೈಲ್ ಮೂಲಕ ಪತ್ರಕರ್ತರು ವಾರೀಸುದಾರರ ಪತ್ತೆಗೆ ಮುಂದಾದರು.

ಪರ್ಸ್‌ನ ನೈಜ ಮಾಲಕರು ಕೋಟೆಬಾಗಿಲಿನ ಸರಸ್ವತಿ ಎಂಬುವುದಾಗಿ ಪತ್ತೆಯಾಗಿ ಪತ್ರಕರ್ತರ ಸಮ್ಮುಖದಲ್ಲಿ ವಲೇರಿಯನ್ ಕುಟಿನ್ಹ ಅವರ ಮೂಲಕವೇ ಪರ್ಸ್ ಹಸ್ತಾಂತರಿಸಲಾಯಿತು. ಸರಸ್ವತಿಯವರು ಕುಟಿನ್ಹಾ ಅವರ ಪ್ರಮಾಣಿಕತೆ ಮೆಚ್ಚಿ ಅವರ ಕಾಲಿಗೆರಗಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News