ಜನರ ಮೇಲೆ ಸರಕಾರಿ ಜಾಹೀರಾತುಗಳು ಬೀರುವ ಪರಿಣಾಮವನ್ನು ಅಧ್ಯಯನ ಮಾಡಲಿರುವ ಪ್ರಸಾರ ಸಚಿವಾಲಯ

Update: 2018-06-18 16:56 GMT

ಹೊಸದಿಲ್ಲಿ, ಜೂ.18: ಸರಕಾರಿ ಜಾಹೀರಾತುಗಳು ಜನರ ಮೇಲೆ ಬೀರುವ ಪರಿಣಾಮವನ್ನು ತಿಳಿಯಲು ಸ್ವತಂತ್ರ ಅಧ್ಯಯನ ನಡೆಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ. ಈ ಕ್ರಮವು ಸರಕಾರದ ಪ್ರಚಾರ ಕಾರ್ಯಕ್ಕಾಗಿ ಮೀಸಲಿಟ್ಟ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಕಾರ್ಯತಂತ್ರ ಸೂಪಿರಸುವ ಉದ್ದೇಶ ಹೊಂದಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಈ ಅಭಿಯಾನವು 2019ರ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಜನರಿಗೆ ತಲುಪಿಸಲು ಯೋಜನೆ ರೂಪಿಸುತ್ತಿರುವ ಮಧ್ಯೆ ನಡೆಸಲಾಗುವುದು. ಜಾಹೀರಾತು ಮತ್ತು ದೃಶ್ಯ ಪ್ರಚಾರ (ಡಿಎವಿಪಿ) ಯು ವಿವಿಧ ಸಚಿವಾಲಯಗಳು, ಇಲಾಖೆಗಳು, ಸರಕಾರಿ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಘಟನೆಗಳ ಪರವಾಗಿ ಜಾಹೀರಾತುಗಳನ್ನು ಹಾಕುವ ಕೇಂದ್ರ ಸರಕಾರ ನೋಡಲ್ ಸಂಸ್ಥೆಯಾಗಿದೆ. ಈ ಅಧ್ಯಯನದಿಂದ ಸರಕಾರದ ಯೋಜನೆಯನ್ನು ಜನರ ಬಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಯಾವ ಮಾಧ್ಯಮವನ್ನು ಬಳಸಬಹುದು ಎಂಬ ಬಗ್ಗೆ ತಿಳಿಯಲಿದೆ.

ಡಿಎವಿಪಿಯು ಸರಕಾರದ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜಾಹೀರಾತಿಗಾಗಿ 2016-17ರಲ್ಲಿ 1,286 ಕೋಟಿ ರೂ. ವೆಚ್ಚ ಮಾಡಿದೆ. ಈ ಮೊತ್ತವು 2015-16ರಲ್ಲಿ ವೆಚ್ಚ ಮಾಡಿದ 1,188.85 ಕೋಟಿ ರೂ. ನಿಂದ ಶೇ. 8.15 ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News