×
Ad

ಬೆಳ್ತಂಗಡಿ: ಕಾಂಗ್ರೆಸ್ ನಾಯಕ ಪದ್ಮಮೂಲ್ಯ ಅನಿಲಡೆ ನಿಧನ

Update: 2018-06-18 22:51 IST

ಬೆಳ್ತಂಗಡಿ, ಜೂ. 18: ಕುಲಾಲ ಸಮಾಜದ ಹಿರಿಯ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಪದ್ಮಮೂಲ್ಯ ಅನಿಲಡೆ (70) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಮಡಂತ್ಯಾರು ಪೂಂಜಾಲಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪಾರಂಕಿ ಬಂಗೇರಕಟ್ಟೆ ಶ್ರೀ ಮಾರಿಗುಡಿಯ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ರಾಗಿ ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉದ್ಯಮಿಯಾಗಿದ್ದ ಅವರು ಕೊಡುಗೈದಾನಿಗಳೂ ಆಗಿದ್ದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News