ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸುವ ನೀತಿ ಕೊನೆಗೊಳಿಸಿ: ಅಮೆರಿಕಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಒತ್ತಾಯ

Update: 2018-06-18 18:20 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜೂ. 18: ಮೆಕ್ಸಿಕೊದಿಂದ ಅಮೆರಿಕ ಪ್ರವೇಶಿಸುವ ಹೆತ್ತವರಿಂದ ಅವರ ವಲಸಿಗ ಮಕ್ಕಳನ್ನು ಬೇರ್ಪಡಿಸುವ ನೂತನ ನೀತಿಗಳನ್ನು ಕೊನೆಗೊಳಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝೈದ್ ರಅದ್ ಅಲ್-ಹುಸೈನ್ ಡೊನಾಲ್ಡ್ ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಟ್ರಂಪ್ ನೀತಿಗಳು ಕಳೆದ 6 ವಾರಗಳ ಅವಧಿಯಲ್ಲಿ ಸುಮಾರು 2,000 ಮಕ್ಕಳ ಮೇಲೆ ಪರಿಣಾಮ ಬೀರಿವೆ ಎಂದು ಅವರು ಹೇಳಿದ್ದಾರೆ.

‘ಮಕ್ಕಳ ಮೇಲೆ ಇಂಥ ದೌರ್ಜನ್ಯವನ್ನು ನಡೆಸುವ’ ಮೂಲಕ, ಹೆತ್ತವರು ವಲಸೆ ಬರುವುದನ್ನು ತಡೆಯಲು ದೇಶವೊಂದು ಪ್ರಯತ್ನಿಸುವುದನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಿಯೋಜಿತ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ ಆರಂಭದಲ್ಲಿ ಝೈದ್ ಮಾತನಾಡುತ್ತಿದ್ದರು. ಇದು ಅವರ ಅಧಿಕಾರಾವಧಿ ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಅವರ ಕೊನೆಯ ಅಧಿವೇಶನವಾಗಿದೆ.

ಸಿರಿಯ, ಮ್ಯಾನ್ಮಾರ್, ಹಂಗೇರಿ, ನಿಕಾರಗುವ, ಇಸ್ರೇಲ್, ಉತ್ತರ ಕೊರಿಯ ಮತ್ತು ಕಾಶ್ಮೀರಗಳಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆಯೂ ಅವರು ಕಳವಳವ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News