ಸಿರಿಯ ಪಡೆಗಳ ಮೇಲೆ ಅಮೆರಿಕ ಮಿತ್ರಕೂಟ ದಾಳಿ

Update: 2018-06-18 18:04 GMT

ಬೈರೂತ್ (ಲೆಬನಾನ್), ಜೂ. 18: ಸಿರಿಯದ ಪೂರ್ವ ಭಾಗದಲ್ಲಿರುವ ಸೇನಾ ನೆಲೆಯೊಂದರ ಮೇಲೆ ಅಮೆರಿಕ ನೇತೃತ್ವದ ಮಿತ್ರಕೂಟ ದಾಳಿ ನಡೆಸಿದೆ ಎಂದು ದೇಶದ ಸರಕಾರಿ ಟಿವಿ ವರದಿ ಮಾಡಿದೆ.

ದಾಳಿಯಲ್ಲಿ ಹಲವಾರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಬೌಕಮಲ್ ಸಮೀಪದ ಅಲ್-ಹಾರಿ ಎಂಬ ಗ್ರಾಮದಲ್ಲಿ ರವಿವಾರ ರಾತ್ರಿಯ ಸುಮಾರಿಗೆ ವಾಯು ದಾಳಿ ನಡೆದಿದೆ ಎಂದು ಸೋಮವಾರ ಬೆಳಗ್ಗೆ ಟಿವಿ ವರದಿ ಮಾಡಿದೆ. ಆದರೆ, ಸಾವು-ನೋವು ಕುರಿತ ವಿವರಗಳನ್ನು ಅದು ನೀಡಿಲ್ಲ.

ಯೂಫ್ರಟಿಸ್ ನದಿಯ ಪೂರ್ವದಲ್ಲಿ ಸಿರಿಯ ಮತ್ತು ಅದರ ಮಿತ್ರ ಪಡೆಗಳು ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಅಮೆರಿಕ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಪಡೆಗಳು ಪೂರ್ವ ದಂಡೆಯಲ್ಲಿ ಐಸಿಸ್ ವಿರುದ್ಧ ಹೋರಾಟ ನಡೆಸುತ್ತಿವೆ.

ಇರಾಕ್ ಗಡಿಗೆ ಸಮೀಪದಲ್ಲಿರುವ ಪುರ್ವ ಸಿರಿಯದ ಕೆಲವು ಸೀಮಿತ ಪ್ರದೇಶಗಳಲ್ಲಿ ಐಸಿಸ್ ಈಗಲೂ ಸಕ್ರಿಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News