ಜುಲೈ 21 ರಿಂದ ಮಂಗಳೂರಿನಿಂದ ಮದೀನಾಕ್ಕೆ ಹಜ್ ವಿಮಾನ ಆರಂಭ

Update: 2018-06-19 14:31 GMT

ಮಂಗಳೂರು, ಜೂ. 19: ಭಾರತೀಯ ಹಜ್ ಸಮಿತಿ ವತಿಯಿಂದ ಆನ್ ಲೈನ್ ಮೂಲಕ ಕುರ್ರಾದಲ್ಲಿ (ಡ್ರಾ ಮೂಲಕ) ಆಯ್ಕೆಯಾದ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಹಾಜಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರವಾಸ ಕೈಗೊಳ್ಳುವ ದಿನಾಂಕವನ್ನು ಇದೀಗಾಗಲೇ ಕೇಂದ್ರ ಹಜ್ ಸಮಿತಿ ನಿಗದಿಗೊಳಿಸಿದೆ.

2018 ಜುಲೈ 21 ರಿಂದ 23 ರ ತನಕ 3 ದಿನಗಳಲ್ಲಿ ತಂಡ ತಂಡವಾಗಿ ಮಂಗಳೂರಿನಿಂದ ಮದೀನಾಕ್ಕೆ ತೆರಳುವ ಹಜ್ಜಾಜ್ ಗಳು ಮಕ್ಕಾ ಹಾಗೂ ಮದೀನಾಗಳಲ್ಲಿ ಪುಣ್ಯ ಕರ್ಮಗಳನ್ನು ನಿರ್ವಹಿಸಿ ಜಿದ್ದಾ ವಿಮಾನ ನಿಲ್ದಾಣದ ಮೂಲಕ ಹಿಂತಿರುಗಲಿರುವರು.

2018 ಸೆಪ್ಟಂಬರ್ 1 ರಿಂದ 3 ರ ತನಕ ಮಕ್ಕಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಜಿದ್ದಾ ಮೂಲಕ ವಾಪಾಸಾಗಲಿದ್ದಾರೆ ಎಂದು ದ.ಕ. ಜಿಲ್ಲಾ ವಕ್ಫ್ ಸದಸ್ಯರಾದ ರಶೀದ್ ವಿಟ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News