ಬಾಲಯೇಸು ನಿಲಯದ ಬಾಲಿಕೆಯರಿಗೆ ಟಾಯ್ಸ್ ವಿತರಣೆ

Update: 2018-06-19 15:11 GMT

ಮಂಗಳೂರು, ಜೂ.19:ನಗರದ ಮೇರಿಹಿಲ್‌ನ ಬಾಲಯೇಸು ಅನಾಥಾಶ್ರಮದಲ್ಲಿರುವ 50 ಹೆಣ್ಮಕ್ಕಳಿಗೆ ಜಾನ್ಲಿನ್ ಟಾಯ್ಸಿ ಎಕ್ಸ್‌ಚೇಂಜ್ ಅವರಿಂದ ಡಾಲ್ಸ್, ಆಟಿಕೆಗಳು ಮತ್ತು ಮಕ್ಕಳ ಪುಸ್ತಕಗಳನ್ನು ವಿತರಿಸಲಾಯಿತು.

ಬೋಂದೆಲ್ ಲಾಫ್ಟರ್ ಕ್ಲಬ್ ಸದಸ್ಯ ಜಾನ್ ಮೊಂತೇರೊ ಅವರಿಂದ ಹಾಸ್ಯ ಮನೋರಂಜನೆ ಹಾಗೂ ಆಶ್ರಮದ ಮಕ್ಕಳು ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಜಾನ್ಲಿನ್ ಟಾಯ್ ಎಕ್ಸ್‌ಚೇಂಜ್‌ನ ಸ್ವಯಂಸೇವಕ ಮೋಹನ್ ಮೊಂತೇರೊ ಮಾತನಾಡಿ ಈ ವರ್ಷದ ಜನವರಿಯಲ್ಲಿ ಪ್ರಾರಂಭಗೊಂಡ ಈ ಸಂಸ್ಥೆಯಿಂದ ಸತತ 4ನೇ ಉಚಿತ ಟಾಯ್ ವಿತರಣಾ ಕಾರ್ಯಕ್ರಮ ಇದಾಗಿದೆ. ಇನ್ನೂ ಹಲವು ಆಶ್ರಮಗಳಲ್ಲಿ ಮಕ್ಕಳು ಟಾಯ್ಸೆ, ಆಟಿಕೆ, ಪುಸ್ತಕಗಳಿಂದ ವಂಚಿತರಾಗಿರುವುದನ್ನು ಸಂಸ್ಥೆ ತಿಳಿದುಕೊಂಡಿದೆ. ಇನ್ನು ಮುಂದೆ ಪ್ರತೀ ತಿಂಗಳು ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆಯು ಆಯೋಜಿಸಲಿದೆ ಎಂದು ಹೇಳಿದರು.

ಮಕ್ಕಳಿಗೆ ಬೇಡವಾದ ಉತ್ತಮ ಸ್ಥಿತಿಯಲ್ಲಿರುವ ಟಾಯ್ಸ್ , ಆಟಿಕೆಗಳು ಮತ್ತು ಮಕ್ಕಳ ಪುಸ್ತಕಗಳನ್ನು ಉದಾರ ಮನಸ್ಸಿನ ದಾನಿಗಳಿಂದ ಜಾನ್ಲಿನ್ ಕಾಟೇಜ್, ವಿಜಯಾ ಬ್ಯಾಂಕ್ ಲೇನ್, ಬೋಂದೆಲ್ ಜಂಕ್ಷನ್, ಮಂಗಳೂರು (ಮೊ.ಸಂ: 9886276608) ಇಲ್ಲಿಗೆ ತಲುಪಿಸಬಹುದಾಗಿದೆ ಎಂದು ಮೋಹನ್ ಮೊಂತೆರೋ ಮನವಿ ಮಾಡಿದರು. ಆಶ್ರಮದ ವಾರ್ಡನ್ ಸಿಸ್ಟರ್ ಅಕ್ವಿನಿಟಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News