ವಿ.ಎಚ್.ಪಿ ನಾಯಕಿ ಆಶಾರಿಂದ ದಾಳಿಯ ಎಚ್ಚರಿಕೆ: ಬಂಧನಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Update: 2018-06-19 16:18 GMT

ಮಂಗಳೂರು, ಜೂ. 19: ಪಬ್, ಲೈವ್ ಬ್ಯಾಂಡ್ ನೆಪವನ್ನು ಹೇಳಿ ಯುವಕ ಯುವತಿಯರ ಮೇಲೆ ದಾಳಿಯ ಎಚ್ಚರಿಕೆಯನ್ನು ನೀಡಿರುವ ವಿ.ಎಚ್.ಪಿ. ನಾಯಕಿ ಆಶಾ ಅವರನ್ನು ಜಿಲ್ಲೆಯ ಶಾಂತಿ ಸುವ್ಯವಸ್ಥೆಯ ಕಾಪಾಡುವ ದೃಷ್ಟಿಯಿಂದ ಶೀಘ್ರ ಬಂಧಿಸಬೇಕೆಂದು ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ಅಮಾಯಕ ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಸಂಸ್ಕೃತಿಯ ಹೆಸರಿನಲ್ಲಿ ಹಲವಾರು ಹಲ್ಲೆಗಳು ನಡೆಸಿ ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನವನ್ನು ಸಂಘಪರಿವಾರ ಮಾಡುತ್ತಿದ್ದು ಇಲಾಖೆಯು ಇವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಸಂಸ್ಕೃತಿಯ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಯುವಜನತೆಯ ಮೇಲೆ ಹಲ್ಲೆ ಮಾಡುವ ಯಾವುದೇ ಅಧಿಕಾರ ಇವರಿಗಿಲ್ಲ. ಸಮಾಜದಲ್ಲಿ ನಡೆಯುವ ಅಂತಹ ಅನೈತಿಕ ಚಟುವಟಿಕೆಯನ್ನು ತಡೆಗಟ್ಟಲು ಇಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತವಿದೆ. ಅವರು ಜವಾಬ್ದಾರಿ ನಿರ್ವಹಿಸುತ್ತಾರೆ. ಇದೀಗ ನಗರದಲ್ಲಿ ಕಾಲೇಜುಗಳು ಪುನಾರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಕಂಡರೆ ಅವರ ಮೇಲೆ ವಿನಾ ಕಾರಣ ಹಲ್ಲೆ ಮಾಡುವ ನೀಚ ಕೆಲಸಕ್ಕೆ ಸಂಘಪರಿವಾರ ಪೂರ್ವ ತಯಾರಿಯಾಗಿದೆ. ಅಲ್ಲದೆ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿ.ಎಚ್.ಪಿ ನಾಯಕಿ ಆಶಾರವರನ್ನು ಶೀಘ್ರ ಬಂಧಿಸಬೇಕು ಮತ್ತು ಇಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ನಿಗಾ ವಹಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಅಫ್ ಇಂಡಿಯಾ ದ ಕ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಆಗ್ರಹಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News