×
Ad

ಜೆಸಿಐ ಮಂಗಳೂರು ವತಿಯಿಂದ ಬೃಹತ್ ರಕ್ತದಾನ ಶಿಬಿರ

Update: 2018-06-19 21:50 IST

ಮಂಗಳೂರು, ಜೂ.19: ರಕ್ತದಾನಿಗಳ ದಿನದ ಅಂಗವಾಗಿ ಜೆಸಿಐ ಮಂಗಳೂರು ಹಾಗೂ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಘಟನೆ (ಭಾರತ) ಮಂಗಳೂರು ಕೇಂದ್ರ ವತಿಯಿಂದ ಇತ್ತೀಚೆಗೆ ನಗರದ ಕೆ.ಎಂ.ಸಿ ಜ್ಯೋತಿ ಬ್ಲಡ್ ಬ್ಯಾಂಕ್‌ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಇಂಡಿಯದ ಮಾಜಿ ರಾಷ್ಟ್ರೀಯ ಕಾರ್ಯವಾಹಕ ಉಪಾಧ್ಯಕ್ಷರಾದ ಜೆಸಿ. ಅನಿಲ್ ಕುಮಾರ್ ಅವರು ರಕ್ತದಾನ ಮಾಡುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ 72 ದಾನಿಗಳು ರಕ್ತದಾನ ಮಾಡುವ ಮೂಲಕ 91 ಯುನಿಟ್ ರಕ್ತವನ್ನು ನೀಡಿದರು. ಇದೇ ಸಂದರ್ಭದಲ್ಲಿ ಜೆಸಿ ಸುನೀಲ್ ಬಂಗೇರ ಅವರು ಸಂಯೋಜಿಸಿದ್ದ ಭಟ್ಕಳದಿಂದ ಮಂಗಳೂರುವರೆಗಿನ ಬೃಹತ್ ರಕ್ತದಾನ ಜಾಗೃತಿ ಬೈಕ್ ರ್ಯಾಲಿಯು ಸಂಜೆ ಐದು ಗಂಟೆಗೆ ನಗರಕ್ಕೆ ಆಗಮಿಸಿತು. ವಲಯಾಧ್ಯಕ್ಷ ಜೆಸಿ ರಾಕೇಶ್ ಕುಂಜೂರು, ವಲಯ ಎಕ್ಸ್‌ವಿ ರಕ್ತದಾನ ಪ್ರಾಮುಖ್ಯತೆಯನ್ನು ವಿವರಿಸಿದರು. ಸ್ವಪ್ರೇರಿತರಾಗಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಜೆಸಿಐ ಮಂಗಳೂರಿನ ಅಧ್ಯಕ್ಷೆ ಶೈಲಜಾ ರಾವ್ ಧನ್ಯವಾದ ಅರ್ಪಿಸಿದರು.

ಈ ವೇಳೆ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ಅಧ್ಯಕ್ಷ ಅನಿಲ್ ಸೆಬಸ್ಟಿಯನ್, ಕೆ.ಎಂ.ಸಿ ಜ್ಯೋತಿ ಬ್ಲಡ್ ಬ್ಯಾಂಕ್‌ನ ವ್ಯವಸ್ಥಾಪಕ ಭವಾನಿ ಶಂಕರ್ ಅವರು ಉಪಸ್ಥಿತರಿದ್ದರು. ಜಿಸಿಐ ಮಂಗಳೂರಿನ ಕಾರ್ಯದರ್ಶಿ ಜೆಸಿ ಶ್ವೇತಾ ಧನ್ಯವಾದ ಸಮರ್ಪಿಸಿದರು. ಜೆಸಿಐ ಮಂಗಳೂರಿನ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಇಂಡಿಯ) ಮಂಗಳೂರು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News