ಕಾಶ್ಮೀರವನ್ನು ನಾಶಮಾಡಿದ ಬಳಿಕ ಸರಕಾರದಿಂದ ಹೊರಬಂದ ಬಿಜೆಪಿ: ಕೇಜ್ರಿವಾಲ್ ಟೀಕೆ

Update: 2018-06-19 16:21 GMT

ಹೊಸದಿಲ್ಲಿ, ಜೂ.18: ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಕೂಟದಿಂದ ಹೊರಬರಲು ಬಿಜೆಪಿ ನಿರ್ಧರಿಸಿರುವುದನ್ನು ಕಟುವಾಗಿ ಟೀಕಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಬಿಜೆಪಿಯು ಕಾಶ್ಮೀರವನ್ನು ನಾಶಮಾಡಿದೆ ಎಂದು ಆರೋಪಿಸಿದ್ದಾರೆ.

ಕಾಶ್ಮೀರವನ್ನು ನಾಶಮಾಡಿದ ಬಳಿಕ ಬಿಜೆಪಿ ಅಲ್ಲಿಂದ ಹೊರಬರುತ್ತಿದೆ. ನೋಟು ರದ್ದತಿ ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆನ್ನೆಲುಬನ್ನೇ ಮುರಿದಿದೆ ಎಂದು ಈ ಹಿಂದೆ ಬಿಜೆಪಿ ಹೇಳಿಕೊಂಡಿರಲಿಲ್ಲವೇ? ಹಾಗಿದ್ದರೆ ಈಗೇನಾಯಿತು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ತೀವ್ರಗಾಮಿತ್ವ ಹಾಗೂ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದಲ್ಲಿ ಮುಂದುವರಿಯುವುದು ಅಸಾಧ್ಯವಾಗಿದೆ ಎಂದು ಹೇಳಿ ಬಿಜೆಪಿ ಪಕ್ಷವು ಪಿಡಿಪಿ ಜೊತೆಗಿನ ಮೈತ್ರಿಯನ್ನು ಅಂತ್ಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News