ಕಾರಿನಲ್ಲಿ ಮಾರಕಾಯುಧ ಸಾಗಾಟ: ಆರೋಪಿ ಬಂಧನ
ಪುತ್ತೂರು, ಜೂ. 19: ಕಾರೊಂದರಲ್ಲಿ ಚೂರಿ, ರಾಡ್ ಸೇರಿದಂತೆ ಮಾರಕಾಯುಧ ಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಸೋಮವಾರ ರಾತ್ರಿ ಪತ್ತೆ ಹಚ್ಚಿದ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಸಂಜಯನಗರ ನಿವಾಸಿ ಉಮ್ಮರ್ ಶಾಫಿ (26) ಬಂಧಿತ ಆರೋಪಿ.
ಕಾರಿನ ಹಿಂಬದಿ ಸೀಟಿನಲ್ಲಿದ್ದ ಕಪ್ಪು ಬಣ್ಣದ ಬ್ಯಾಗ್‌ನೊಳಗಡೆ ಕಪ್ಪು ಪ್ಲಾಸ್ಟಿಕ್ ಕವರ್‌ನಲ್ಲಿದ್ದ ಕಬ್ಬಿಣದ ಹಿಡಿಯ ದೊಡ್ಡ ಚೂರು, ಒಂದು ಜತೆ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮನೆ ಕಳವಿಗೆ ಇವುಗಳನ್ನು ಬಳಸಿಕೊಳ್ಳುವ ಹುನ್ನಾರ ನಡೆಸಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಗರದ ಸಾಮೆತ್ತಡ್ಕ ಎಂಬಲ್ಲಿ ತಪಾಸಣೆಂದು ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ಚಾಲಕ ಉಮ್ಮರ್ ಶಾಫಿ ಅವರಲ್ಲಿ ದಾಖಲಾತಿ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಬಳಿಕ ಕಾರನ್ನು ತಪಾಸಣೆ ನಡೆಸಿದಾಗ ಮಾರಕ ಆಯುಧಗಳಿರುವುದು ಕಂಡು ಬಂದಿತ್ತು. ಈ ಬಗ್ಗೆ ಆರೋಪಿ ಸಮರ್ಪಕ ಉತ್ತರ ನೀಡರುವುದರಿಂದ ವಶಕ್ಕೆ ತೆಗೆದುಕೊಳ್ಳಲಾಯಿತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.