ವಿದ್ಯುತ್ ಆಘಾತ: ಮಹಿಳೆ ಮೃತ್ಯು

Update: 2018-06-19 17:08 GMT

ಪಡುಬಿದ್ರೆ, ಜೂ. 19:  ಪಂಪ್ ಚಾಲು ಮಾಡಲು ತೆರಳಿದ್ದ ಮಹಿಳೆಯೋರ್ವರು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪಡುಬಿದ್ರಿ ಅಬ್ಬೇಡಿ ನಿವಾಸಿ ರಾಘು ದೇವಾಡಿಗ ಎಂಬವರ ಪತ್ನಿ ವನಜ (53) ಮೃತರು ಎಂದು ಗುರುತಿಸಲಾಗಿದೆ.

ರಾತ್ರಿ 10 ಗಂಟೆ ಸುಮಾರಿಗೆ ಪಂಪ್ ಶೆಡ್‌ಗೆ ಪಂಪ್ ಚಾಲು ಮಾಡಲು ತೆರಳಿದ್ದರು. ಆದರೆ ಮನೆಗೆ ಬಾರದಿರುವುದರಿಂದ ಗಾಭರಿಗೊಂಡು ಮಗ ಹೋಗಿ ನೋಡಿದಾಗ ಅವರು ಶೆಡ್‌ನಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಅವರನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವನಜ ಹೈನುಗಾರಿಕೆ ಹಾಗೂ ಕೃಷಿ ಕಾರ್ಯ ಮಾಡಿ ಜೀವನ ಸಾಗಿಸುತ್ತಿದ್ದರು. ಮೃತರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News