ಎಸೆಸೆಲ್ಸಿ ಪೂರಕ ಪರೀಕ್ಷೆ: ನಿಷೇಧಾಜ್ಞೆ

Update: 2018-06-19 17:12 GMT

ಮಂಗಳೂರು, ಜೂ.19: ಜೂ.21 ರಿಂದ 28 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಎಸೆಸೆಲ್ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿ ಪೊಲೀಸು ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಎಸೆಸೆಲ್ಸಿ, ಪೂರಕ ಪರೀಕ್ಷಾ ಕೇಂದ್ರಗಳ 200ಮೀ. ಸುತ್ತಳತೆಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶಿಸಿದ್ದಾರೆ.

ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುವುದು/ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.

ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳ ಮಾಹಿತಿಯನ್ನು ರವಾನಿಸುವ ಅಥವಾ ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿದೆ.

ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ ಇಂತಿವೆವಿಠಲ ಪದವಿಪೂರ್ವ ಕಾಲೇಜು, ವಿಟ್ಲ, ಶಾರದಾ ಪ್ರೌಢಶಾಲೆ, ಪಾಣೆಮಂಗಳೂರು, ಬಂಟ್ವಾಳ, ಎಸ್.ವಿ.ಎಸ್. ಪ್ರೌಢಶಾಲೆ , ಬಂಟ್ವಾಳ, ಸೈಂಟ್ ತೆರೆಸಾ ಪ್ರೌಢಶಾಲೆ, ಬೆಳ್ತಂಗಡಿ, ಶ್ರೀಮಂಜುನಾಥೇಶ್ವರ ಪ್ರೌಢಶಾಲೆ (ಎಸ್.ಡಿಎಂ) ಧರ್ಮಸ್ಥಳ, ರೋಜಾರಿಯೋ ಪ್ರೌಢಶಾಲೆ, ಬೋಳಾರ, ಮಂಗಳೂರು, ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಹಂಪನಕಟ್ಟೆ, ಸೈಂಟ್ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್ ಬೈಲ್, ಕೆನರಾ ಪ್ರೌಢಶಾಲೆ (ಪ್ರಧಾನ), ಡೊಂಗರಕೇರಿ, ಗಣಪತಿ ಪ.ಪೂ. ಕಾಲೇಜು, ಹಂಪನಕಟ್ಟೆ, ಬೆಸೆಂಟ್ ಪ್ರೌಢಶಾಲೆ, ಕೊಡಿಯಾಲ್ ಬೈಲ್, ಕಾಸಿಯಾ ಪ್ರೌಢಶಾಲೆ, ಜೆಪ್ಪು, ಮಂಗಳೂರು, ಸೈಂಟ್ ಮೆರೀಸ್ ಬಾಲಕಿಯರ ಪ್ರೌಢಶಾಲೆ, ಫಳ್ನೀರ್, ಪದುವಾ ಪ್ರೌಢಶಾಲೆ, ನಂತೂರು, ಮಂಗಳೂರು, ಸೈಂಟ್ ಆಗ್ನೇಸ್ ಪ್ರೌಢಶಾಲೆ, ಬೆಂದೂರ್, ಮಂಗಳೂರು, ಜೈನ್ ಪದವಿಪೂರ್ವ ಕಾಲೇಜು,(ಪ್ರೌಢಶಾಲಾ ವಿಭಾಗ), ಮೂಡಬಿದ್ರೆ, ಸರಕಾರಿ ಪದವಿಪೂರ್ವ ಕಾಲೇಜು, ಕೊಂಬೆಟ್ಟುಪುತ್ತೂರು, ಸಂತ ಫಿಲೋಮಿನಾ ಪ್ರೌಢಶಾಲೆ, ದರ್ಬೆ, ಪುತ್ತೂರು, ಸೈಂಟ್ ವಿಕ್ಟರ್ ಬಾಲಕಿಯರ ಪ್ರೌಢಶಾಲೆ, ಪುತ್ತೂರು, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News