ನಿಧನ: ಮೀಂಜ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ಲಾ ಕೂಡೆಲ್

Update: 2018-06-19 17:57 GMT

ಮಂಜೇಶ್ವರ, ಜೂ. 19: ಇಲ್ಲಿನ ಮೀಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಕೂಡೆಲ್ (77) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಮೀಯಪದವು ಸಮೀಪದ ಕೂಡೆಲ್‌ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿವೆ.

ಕೃಷಿಕರಾಗಿದ್ದ ಮೃತ ಅಬ್ದುಲ್ಲಾ ಅವರು ಹಲವು ವರ್ಷಗಳ ಕಾಲ ಮೀಂಜ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಮುಸ್ಲಿಮ್ ಲೀಗ್‌ನ ಮುಖಂಡರಾಗಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ, ಪ್ರಸ್ತುತ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಆಡಳಿತ ನಿರ್ದೇಶಕರಾಗಿರುವ ಎ.ಬಿ. ಇಬ್ರಾಹೀಂ ಅವರ ಬಾವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News