ಹುದೈದಾ ವಿಮಾನ ನಿಲ್ದಾಣ ಯಮನ್ ಪಡೆಗಳ ನಿಯಂತ್ರಣಕ್ಕೆ

Update: 2018-06-19 18:22 GMT

ಏಡನ್ (ಯಮನ್), ಜೂ. 19: ಅರಬ್ ಮಿತ್ರಕೂಟ ಬೆಂಬಲಿತ ಯಮನ್ ಸೇನೆ ಹುದೈದಾ ವಿಮಾನ ನಿಲ್ದಾಣದ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಸ್ಥಳೀಯ ಸುದ್ದಿ ಮೂಲಗಳು ತಿಳಿಸಿವೆ.

ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟವು ಮಂಗಳವಾರ ಹುದೈದಾ ವಿಮಾನ ನಿಲ್ದಾಣದ ಪ್ರಧಾನ ಆವರಣವನ್ನು ಪ್ರವೇಶಿಸಿತು ಎಂದು ಯಮನ್ ಸೇನಾ ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಮಿತ್ರಕೂಟ ಮತ್ತು ಇರಾನ್ ಬೆಂಬಲಿತ ಹೌದಿ ಬಂಡುಕೋರರ ನಡುವೆ ಮಂಗಳವಾರ ಬೆಳಗ್ಗೆ ಭೀಕರ ಕಾಳಗ ನಡೆದ ಬಳಿಕ ಯಮನ್ ಸೇನೆಯು ವಿಮಾನ ನಿಲ್ದಾಣದ ಒಳಗೆ ನುಗ್ಗಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಅಮೆರಿಕವು ವಲಸಿಗರ ಶಿಬಿರವಾಗಲು ಸಾಧ್ಯವಿಲ್ಲ. ಅದು ನಿರಾಶ್ರಿತರ ಆಶ್ರಯ ತಾಣವೂ ಅಲ್ಲ. ಯುರೋಪ್‌ನಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿ. ಇತರ ಕಡೆಗಳಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿ. ಅಮೆರಿಕದಲ್ಲಿ ಹಾಗೆ ಆಗಲು ಬಿಡಲು ಸಾಧ್ಯವಿಲ್ಲ.

ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News