ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಹೀಗೊಂದು ವಿಭಿನ್ನ ಚಾಲೆಂಜ್ !

Update: 2018-06-20 14:30 GMT

ಮಂಗಳೂರು, ಜೂ. 20: ಶಿಕ್ಷಣ, ಆರೋಗ್ಯ, ಪರಿಸರಕ್ಕೆ ಸಂಬಂಧಿಸಿದ ಸಾಮಾಜಿಕ ಬದ್ಧತೆಯ ಸಾವಾಲುಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವೀಕರಿಸಬೇಕು ಎಂದು ತಾನು ಅವರಿಗೆ ಸವಾಲೊಡ್ಡುವುದಾಗಿ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.

ಈ ರೀತಿಯ ಕೆಲಸದಲ್ಲಿ ತಾನು ತೊಡಗಿಸಿಕೊಂಡಿದ್ದು ನನ್ನ ಮನೆಯ ತ್ಯಾಜ್ಯ ನೀರನ್ನು ಮರು ಬಳಕೆ ಮಾಡುವ ಬಗ್ಗೆ ಹಾಗೂ ಮಳೆ ನೀರನ್ನು ಬಳಕೆ ಮಾಡುವ ಬಗ್ಗೆ ನನ್ನ ಮನೆಯಲ್ಲಿ ಸರಳವಾಗಿ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಈ ರೀತಿ ನೀರಿನ ಮರು ಬಳಕೆಯಿಂದ ನನಗೆ ಶೇ 50ರಷ್ಟು ನೀರು ಉಳಿತಾಯವಾಗಿದೆ. ಜನರನ್ನು ಗಮನ ಸೆಳೆಯುವ ವೈಯಕ್ತಿಕ ವಿಚಾರಗಳ ಬಗ್ಗೆ ಚ್ಯಾಲೆಂಜ್ ಮಾಡುವ ಬದಲು ಸಾಮಾಜಿಕ ಬದ್ಧತೆಯ ಕೆಲಸಗಳನ್ನು ಸವಾಲಾಗಿ ಎಲ್ಲಿನ ಎಂ.ಪಿ, ಎಂ.ಎಲ್.ಎ ಗಳು ಹಾಗೂ ಸಾರ್ವಜನಿಕರು ಸ್ವೀಕರಿಸಿ ತಾವು ಮಾಡಿದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಜನಜಾಗೃತಿ ಮತ್ತು ಸಾಮಾಜಿಕ ಬದ್ಧತೆಗೆ ಪೂರಕವಾದ ಕೆಲಸ ಮಾಡಿದಂತಾಗುತ್ತದೆ ಎಂದು ಎಂ.ಜೆ.ಹೆಗ್ಡೆ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸವಾಲು ಸ್ವೀಕರಿಸುವವರು ಬಡಜನರಿಗೆ ಔಷಧಿಯನ್ನು ನೀಡುವುದು, ನೀರಿನ ಶುದ್ಧೀಕರಣ, ವೃದ್ಧಾಶ್ರಮಗಳಿಗೆ, ನಿರ್ಗಗತಿಕರ ಆಶ್ರಮಗಳಿಗೆ ಸಹಾಯ ನೀಡುವುದು, ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಯಾವೂದದರೊಂದು ಕಾರ್ಯಕ್ರಮಗಳ ಮೂಲಕ ಜನರಿಗೆ ಸಹಾಯ ಮಾಡುವ ಮೂಲಕ ಸವಾಲನ್ನು ಸ್ವೀಕರಿಸಲಿ ಜನ ಸಾಮಾನ್ಯರು ಈ ರೀತಿಯ ಸವಾಲನ್ನು ಸ್ವೀಕರಿಸಲಿ ಎಂದು ಎಂ.ಜಿ.ಹೆಗ್ಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಘವೇಂದ್ರ ರಾವ್, ಸುಧೀರ್ ಹೆಗ್ಡೆ, ಸ್ವರ್ಣ ಸುಂದರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News