25 ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ
Update: 2018-06-20 18:59 IST
ಜೆರುಸಲೇಂ, ಜೂ. 20: ಇಸ್ರೇಲ್ ಯುದ್ಧ ವಿಮಾನಗಳು ಬುಧವಾರ ಮುಂಜಾನೆ ಗಾಝಾ ಪಟ್ಟಿಯಲ್ಲಿರುವ 25 ಹಮಾಸ್ ನೆಲೆಗಳ ಮೇಲೆ ದಾಳಿ ನಡೆಸಿವೆ.
ಇಸ್ರೇಲ್ ಭೂಭಾಗದತ್ತ ಹಮಾಸ್ ಪಡೆಗಳು ರಾಕೆಟ್‌ಗಳು ಮತ್ತು ಮೋರ್ಟರ್ ಶೆಲ್‌ಗಳನ್ನು ಹಾರಿಸಿದ ಬಳಿಕ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ದಕ್ಷಿಣ ಗಾಝಾ ಪಟ್ಟಿಯಲ್ಲಿ ನಡೆದ ವಾಯುದಾಳಿಯೊಂದರಲ್ಲಿ ಇಬ್ಬರು ಹಮಾಸ್ ಭದ್ರತಾ ಸಿಬ್ಬಂದಿ ಗಾಯಗೊಂಡರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ದಾಳಿಯುದ್ದಕ್ಕೂ ವಾಯು ದಾಳಿ ಸೈರನ್‌ಗಳು ಹಾಗೂ ಇಸ್ರೇಲ್‌ನ ಫೋನ್ ಎಚ್ಚರಿಕಾ ಆ್ಯಪ್‌ಗಳು ಸದ್ದು ಮಾಡಿದವು.
ಇಸ್ರೇಲ್ ಭೂಭಾಗದತ್ತ ಹಾರಿಸಲಾದ 30 ರಾಕೆಟ್‌ಗಳು ಮತ್ತು ಮೋರ್ಟರ್ ಶೆಲ್‌ಗಳನ್ನು ಇಸ್ರೇಲ್ ಸೇನೆ ಲೆಕ್ಕ ಮಾಡಿತು. ತನ್ನ ಐಯರ್ನ್ ಡೋಮ್ ಕ್ಷಿಪಣಿ ನಿಗ್ರಹ ವ್ಯವಸ್ಥೆಯು 7 ರಾಕೆಟ್‌ಗಳನ್ನು ತಡೆಯಿತು ಎಂದು ಇಸ್ರೇಲ್ ಸೇನೆ ತಿಳಿಸಿದೆ.