ಹಕ್ಕಿ ಹೊಡೆತಕ್ಕೆ ಸಿಲುಕಿದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

Update: 2018-06-20 15:51 GMT

ಚೆನ್ನೈ, ಜೂ.20: 131 ಪ್ರಯಾಣಿಕರನ್ನು ಹೊತ್ತು ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ ಹಕ್ಕಿ ಹೊಡೆತಕ್ಕೆ ಸಿಲುಕುವ ಮೂಲಕ ಆಕಾಶಕ್ಕೇರಿದ ಇಪ್ಪತ್ತು ನಿಮಿಷಗಳ ಒಳಗೆ ತುರ್ತಾಗಿ ನಗರದ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಘಟನೆ ಬುಧವಾರ ನಡೆದಿದೆ.

ಘಟನೆಯಲ್ಲಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಏರ್ ಇಂಡಿಯ ಇಂಜಿನಿಯರ್‌ಗಳು ವಿಮಾನಕ್ಕೆ ಆಗಿರುವ ಹಾನಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಏರ್ ಇಂಡಿಯ ವಕ್ತಾರ ತಿಳಿಸಿದ್ದಾರೆ. ಘಟನೆಯಿಂದ ಬಾಧಿತರಾದ ಪ್ರಯಾಣಿಕರನ್ನು ನಂತರ ಸಂಸ್ಥೆಯ ಪರ್ಯಾಯ ವಿಮಾನದ ಹಾಗೂ ಇತರ ಖಾಸಗಿ ಸಂಸ್ಥೆಗಳ ವಿಮಾನದ ಮೂಲಕ ಕಳುಹಿಸಿಕೊಡಲಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News