×
Ad

ಬೈಕಿಗೆ ಖಾಸಗಿ ಬಸ್ಸು ಢಿಕ್ಕಿ: ಸವಾರನಿಗೆ ಗಾಯ

Update: 2018-06-20 21:58 IST

ಮಂಗಳೂರು, ಜೂ. 20: ಖಾಸಗಿ ಸರ್ವಿಸ್ ಬಸ್ಸು ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಧಾವಂತದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಜಂಕ್ಷನ್‌ನಲ್ಲಿ ಬುಧವಾರ ಮಧ್ಯಾಹ್ನ ನೆಡೆದಿದೆ.

ಬಜಾಲ್‌ನ ರಾಬರ್ಟ್ ನೆಟ್ಟೊ (37) ಎಂಬವರು ತೀವ್ರ ಗಾಯಗೊಂಡಿದ್ದಾರೆ. ರಾಬರ್ಟ್ ಅವರು ಲೆಕ್ಕ ಪರಿಶೋಧನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದು, ಮಧ್ಯಾಹ್ನ ಬೈಕ್‌ನಲ್ಲಿ ಊಟಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸಿಕೊಂಡು ರಾಬರ್ಟ್ ಅವರು ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದು, ಬಸ್ ಚಾಲಕನು ಮತ್ತೊಂದು ವಾಹನವನ್ನು ಎಡ ಬದಿಯಿಂದಲೇ ಓವರ್ ಟೇಕ್ ಮಾಡಲು ಯತ್ನಿಸಿದ್ದನು. ಆಗ ಬೈಕಿಗೆ ಬಸ್ಸು ಢಿಕ್ಕಿಯಾಗಿದೆ.

ರಾಬರ್ಟ್ ಅವರ ಮುಖ ಮತ್ತು ತಲೆಗೆ ಗಾಯಗಳಾಗಿವೆ. ಟ್ರಾಫಿಕ್ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News