×
Ad

ಅಲೆವೂರು: ಕಾಪು ಶಾಸಕ ಲಾಲಾಜಿ ಮೆಂಡನ್‌ಗೆ ಅಭಿನಂದನೆ

Update: 2018-06-20 22:02 IST

ಉಡುಪಿ, ಜೂ.20: ಕಾಪು ಕ್ಷೇತ್ರದ ನೂತನ ಶಾಸಕ ಲಾಲಾಜಿ ಆರ್. ಮೆಂಡನ್ ಅಭಿನಂದನಾ ಕಾರ್ಯಕ್ರಮವನ್ನು ಬುಧವಾರ ಅಲೆವೂರು ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಗಿತ್ತು.

ಅಲೆವೂರು ಕಾಪು ಕ್ಷೇತ್ರದಲ್ಲಿಯೇ ಅತ್ಯಂತ ಕ್ರಿಯಾಶೀಲ ಗ್ರಾಪಂ ಆಗಿದ್ದು, ಅದಕ್ಕಾಗಿ ಕಾಪು ಕ್ಷೇತ್ರದಲ್ಲೇ ಮೊದಲ ಪಂಚಾಯತ್ ಭೇಟಿಯನ್ನು ಅಲೆವೂರಿಗೆ ನೀಡಿದ್ದೇನೆ. ಅಲೆವೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚಾಯತ್ ಹಾಗೂ ಗ್ರಾಮಸ್ಥರೊಂದಿಗೆ ಸದಾ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತೇನೆ ಎಂದು ಶಾಸ ಲಾಲಾಜಿ ಆರ್.ಮೆಂಡನ್ ಹೇಳಿದರು.

ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ್ ಬಾಬು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಕ್ಕುಪತ್ರಗಳ ವಿತರಣೆ ಹಾಗೂ ಪಂಚಾಯತ್‌ನ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ತಾಪಂ ಸದಸ್ಯೆ ಬೇಬಿ ರಾಜೇಶ್, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ರಾದ ಹರೀಶ್ ಸೇರಿಗಾರ್, ಶೇಖರ್ ಆಚಾರ್ಯ, ಕೃಷ್ಣ ಜತ್ತನ್ನ, ಶಂಕರ ಪಾಲನ್, ಸುಧಾಮ, ಶಕುಂತಳಾ ರಾವ್, ಶ್ರೀಮತಿ ಶೆಟ್ಟಿ, ಶಾಂತ ನಾಯ್ಕ್, ಪ್ರೇಮ ಕೊರಂಗ್ರಪಾಡಿ, ಪುಷ್ಪಲತಾ ಮಾರ್ಪಳ್ಳಿ, ಪ್ರಶಾಂತ ಆಚಾರ್ಯ, ಶಶಿಕಲಾ ಶೆಟ್ಟಿ, ಯಶೋಧ ಶೆಟ್ಟಿ, ಮಮತಾ ಶೆಟ್ಟಿಗಾರ್, ಸೌಮ್ಯ ಸುರೇಶ್ ನಾಯಕ್, ದಿನೇಶ್ ನಾಯ್ಕ್, ಮಾಜಿ ಉಪಾಧ್ಯಕ್ಷ ಅಶೋಕ್ ಕುಮಾರ್, ಮಾಜಿ ಸದಸ್ಯ ಂತೋಷ್ ಶೆಣೈ ಉಪಸ್ಥಿತರಿದ್ದರು.

ಬಳಿಕ ಪಂಚಾಯತ್ ಎದುರಿಸುತ್ತಿರುವ ಹಲವು ಸಮಸ್ಯೆಗಳಾದ ಗೋಮಾಳ ಭೂಮಿ, ಡೀಮ್ಡ್ ಫಾರೆಸ್ಟ್ ಜಮೀನುಗಳ ಹಕ್ಕುಪತ್ರ, ಕಂದಾಯ ಹಾಗೂ ಅರಣ್ಯ ಭೂಮಿಯ ಗಡಿಗುರುತು, ಶುಧ್ದ ಕುಡಿಯುವ ನೀರು, ಪಂಚಾಯತ್ ನೂತನ ಕಟ್ಟಡದ ಬಗ್ಗೆ ಚರ್ಚಿಸಲಾಯಿತು. ಗ್ರಾಪಂ ಕಟ್ಟಡಕ್ಕೆ 10 ಲಕ್ಷ ರೂ. ಅನುದಾನ ನೀಡುವ ಭರವಸೆಯನ್ನು ಶಾಸಕರು ಇದೇ ಸಂದರ್ಭದಲ್ಲಿ ನೀಡಿ ದರು. ಪಂಚಾಯತ್ ಅಭಿವೃಧ್ಧಿ ಅಧಿಕಾರಿ ದಯಾನಂದ ಬೆಣ್ಣೂರು ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News