ಕುಂದಾಪುರ: ಮೊಬೈಲ್ ಅಂಗಡಿಯಿಂದ ಕಳವು
Update: 2018-06-20 22:14 IST
ಕುಂದಾಪುರ, ಜೂ.20: ಕೋಟೇಶ್ವರ ಗ್ರಾಮದಲ್ಲಿರುವ ಮಹಾಮ್ಮಾಯಿ ಮೊಬೈಲ್ ಅಂಗಡಿಗೆ ಜೂ.19ರಂದು ಬೆಳಗ್ಗೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಸಾವಿರಾರು ರೂ. ವೌಲ್ಯದ ಮೊಬೈಲ್ ಕಳವು ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಪ್ರಕಾಶ್ ಪೈ ಎಂಬವರ ಮೊಬೈಲ್ ಅಂಗಡಿಗೆ ಬಂದ ನೀಲಿ ಟಿಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ ವ್ಯಕ್ತಿ ಮೊಬೈಲ್ ತೋರಿಸಲು ಹೇಳಿ ತನ್ನ ಕೈಯಲ್ಲಿದ್ದ ಕೊಡೆಯ ಒಳಗೆ ಮೊಬೈಲ್ ಒಂದನ್ನು ಹಾಕಿಕೊಂಡು ಹೋಗಿ ರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಕಳವಾದ ಮೊಬೈಲ್ ಮೌಲ್ಯ 16,000 ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.