×
Ad

ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ: ನೌಕರರ ಬೃಹತ್ ಸಮಾವೇಶ

Update: 2018-06-20 22:47 IST

ಉಡುಪಿ, ಜೂ.20: ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಾವೇಶ ಜೂ.24ರ ಅಪರಾಹ್ನ 3 ಕ್ಕೆ ಕುಂದಾಪುರ ಎಲ್‌ಐಸಿ ರಸ್ತೆಯ ಕಾರ್ಮಿಕ ಭವನದಲ್ಲಿ ನಡೆಯಲಿದೆ.

ಹೊರಗುತ್ತಿಗೆ ಪದ್ಧತಿ ಕೈಬಿಡಲು ಒತ್ತಾಯಿಸಿ, ನೇರ ನೇಮಕಾತಿಯನ್ನು ವಿರೋಧಿಸಿ, ಹಾಲಿ ಹೊರಗುತ್ತಿಗೆ ನೌಕರರನ್ನೇ ಖಾಯಂ ಮಾಡಲು ಆಗ್ರಹಿಸಿ, ಅಲ್ಲಿಯವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಸರಕಾರವನ್ನು ಆಗ್ರಹಿಸುವ ಬೃಹತ್ ಸಮಾವೇಶವನ್ನು ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಉದ್ಘಾಟಿಸಲಿದ್ದಾರೆ.

ಜಿಲ್ಲೆಯ ಎಲ್ಲಾ ಹೊರಗುತ್ತಿಗೆ ನೌಕರರು ಈ ಸಮಾವೇಶದಲ್ಲಿ ಭಾಗವಹಿಸು ವಂತೆ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News