×
Ad

ಉಡುಪಿ: ಜೂ.24ಕ್ಕೆ 3ನೇ ಕರಾವಳಿ ಕಿರುಚಿತ್ರೋತ್ಸವ-2018

Update: 2018-06-20 22:48 IST

ಉಡುಪಿ, ಜೂ.20: ಯುನಿಸೆಫ್ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಕಟಪಾಡಿ-ಉಡುಪಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ಹಾಗೂ ಬಡಗುಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಉಡುಪಿ ಇವರ ಸಹಯೋಗದಲ್ಲಿ 3ನೇ ಕರಾವಳಿ ಕಿರುಚಿತ್ರೋತ್ಸವ-2018 ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂ.24ರಂದು ಬೆಳಗ್ಗೆ 9 ರಿಂದ ಅಪರಾಹ್ನ 1 ರವರೆಗೆ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.

ಕಿರುಚಿತ್ರೋತ್ಸವವನ್ನು ಬೆಳಗ್ಗೆ 9:00ಕ್ಕೆ ಉದ್ಯಮಿ ಸಖಾರಾಮ್ ಶೆಟ್ಟಿ ದೆಂದೂರು ಉದ್ಘಾಟಿಸಲಿದ್ದಾರೆ. ಹಿರಿಯ ಚಿಂತಕ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಉದ್ಯಮಿ ಅರ್ನಾಲ್ಡ್ ಡಿಸಿಲ್ವ, ಶಿರ್ವ ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ್‌ಶೆಟ್ಟಿ ದೆಂದೂರು, ಬೆಳ್ಳಿಸಾಕ್ಷಿ ಉಡುಪಿ ಜಿಲ್ಲಾ ಘಟಕದ ನಿಕಟಪೂರ್ವ ಸಂಚಾಲಕ ಪ್ರೇಮಾನಂದ ಕಲ್ಮಾಡಿ, ಕತ್ತಲೆ ಕೋಣೆ ಚಿತ್ರ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ, ಪ್ರೈಮ್ ಟಿವಿ ನಿರ್ದೇಶಕ ರೂಪೇಶ್ ವಿ.ಕಲ್ಮಾಡಿ, ಯುವ ಉದ್ಯಮಿ ನವೀನ್ ಅಮೀನ್ ಶಂಕರಪುರ, ಟೈಮ್ಸ್ ಆಫ್ ಕುಡ್ಲ ತುಳುಪತ್ರಿಕೆಯ ಪ್ರಧಾನ ವ್ಯವಸ್ಥಾಪಕಿ ಯಶೋಧ ಕೇಶವ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ವಿಜೇತ ನೃತ್ಯನಿರ್ದೇಶಕ ವೃಜ ಕಿಶೋರ್ ಆಚಾರ್ಯ ಉಡುಪಿ ಇವರನ್ನು ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭ ಅಪರಾಹ್ನ 12:00ಕ್ಕೆ ನಡೆಯಲಿದ್ದು, ಉದ್ಯಮಿ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ ಪ್ರಶಸ್ತಿ ವಿತರಣೆ ಮಾಡುವರು. ಬಡಗುಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಚಲನಚಿತ್ರನಟ ಪೃಥ್ವಿ ಅಂಬರ್, ಚಲನಚಿತ್ರ ನಟಿ ಶಿಲ್ಪಾಸುವರ್ಣ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಚಲನಚಿತ್ರ ನಿರ್ದೇಶಕ ಕೃಷ್ಣಪ್ರಸಾದ್ ಬೆಂಗಳೂರು, ರಂಜಿತ್ ಸುವರ್ಣ, ಚಲನಚಿತ್ರನಟಿ ಜೆನಿಫರ್ ಸ್ನೇಹ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಮೀಝ ಹುಸೇನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಯುವ ಪ್ರತಿಭಾವಂತ ಸಿನೆಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು ಇವರಿಗೆ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

10 ನಿರ್ದೇಶಕರ 10 ಕಿರುಚಿತ್ರಗಳು:  3ನೇ ಕರಾವಳಿ ಕಿರುಚಿತ್ರೋತ್ಸವಕ್ಕೆ ಒಟ್ಟು 52 ಕಿರುಚಿತ್ರಗಳು ಪ್ರವೇಶ ಪಡೆದಿದ್ದು, ಅಂತಿಮವಾಗಿ 10 ಮಂದಿ ಯುವ ನಿರ್ದೇಶಕರ 10 ಕಿರುಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News