ಮಂಗಳೂರು: ಏರ್‌ಪೋರ್ಟ್ ರಸ್ತೆ ಬಳಿ ಗುಡ್ಡ ಕುಸಿತ; ಸ್ಥಳಕ್ಕೆ ಸಂಸದ ನಳಿನ್ ಭೇಟಿ
Update: 2018-06-21 21:26 IST
ಮಂಗಳೂರು, ಜೂ.21: ಏರ್‌ಪೋರ್ಟ್ ರಸ್ತೆ ಸಮೀಪದ ಅದ್ಯಾಪಡಿ ಬಳಿ ಸರಕಾರಿ ಜಾಗದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಯಾಣದ ಸಿದ್ಧತೆಯಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ತುರ್ತು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೂಡಲೇ ಸ್ಥಳದಲ್ಲಿನ ಮಣ್ಣಿನ ಗುಡ್ಡೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಏರ್‌ಪೋರ್ಟ್ ರಸ್ತೆ ಸಮೀಪದಲ್ಲಿ ಗುಡ್ಡ ಕುಸಿತಗೊಂಡಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಜೆಸಿಬಿ ಮೂಲಕ ಮಣ್ಣಿನ ಗುಡ್ಡೆಯನ್ನು ತೆರವುಗೊಳಿಸಲಾಗುತ್ತಿದೆ. ನಿಧಾನ ಗತಿಯಲ್ಲಿ ವಾಹನಗಳು ಚಲಿಸುತ್ತಿದ್ದು, ಸ್ಥಳದಲ್ಲಿ ಎಸ್ಸೈ ಹಾಗೂ ಪೊಲೀಸ್ ಸಿಬ್ಬಂದಿ ಇದ್ದಾರೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.