'ಟ್ಯಾಲೆಂಟ್' ವತಿಯಿಂದ ಮಹಿಳೆಯರಿಗೆ ಉಚಿತ ಇಸ್ಲಾಮಿಕ್ ತರಗತಿ
Update: 2018-06-21 22:01 IST
ಮಂಗಳೂರು, ಜೂ. 21: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಇಸ್ಲಾಮಿಕ್ ತರಗತಿಗಳು ನಡೆಯಲಿದೆ.
ಇಸ್ಲಾಮಿಕ್ ಶಿಕ್ಷಣದಲ್ಲಿ ಸಾಕಷ್ಟು ಜ್ಞಾನವಿರುವ ಮಹಿಳಾ ಸಂಪನ್ಮೂಲ ವ್ಯಕ್ತಿಗಳು ತರಗತಿಯನ್ನು ನಡೆಸಲಿದ್ದಾರೆ. ತರಗತಿಗಳು ಕಂಕನಾಡಿಯಲ್ಲಿರುವ ಸಂಸ್ಥೆಯ ಕಟ್ಟಡದಲ್ಲಿ ನಡೆಯಲಿದ್ದು, ಇಸ್ಲಾಮಿನ ಕುರಿತು ಕಲಿಯಲು ಬಯಸುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.
ಜೂ. 28ರಂದು ಹೆಸರು ನೋಂದಾಯಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 8105869284, 9986177410 ಸಂಪರ್ಕಿಸಬಹುದು.