ಮಾನವಹಕ್ಕುಗಳ ಮಂಡಳಿಯಿಂದ ಅಮೆರಿಕ ಹೊರಗೆ: ಅದೇ ವಲಯದ ದೇಶವೊಂದರ ಆಯ್ಕೆ: ವಿಶ್ವಸಂಸ್ಥೆ

Update: 2018-06-21 16:44 GMT

ವಿಶ್ವಸಂಸ್ಥೆ, ಜೂ. 21: ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯಲ್ಲಿ ಅಮೆರಿಕ ತೆರವು ಮಾಡಿರುವ ಸ್ಥಾನವನ್ನು ಅದೇ ವಲಯದ ದೇಶವೊಂದರಿಂದ ಭರ್ತಿ ಮಾಡಲಾಗುವುದು.

ವಿಶ್ವಸಂಸ್ಥೆಯ ಮಹಾ ಸಭೆಯ ಅಧ್ಯಕ್ಷ ಮಿರೊಸ್ಲಾವ್ ಲಜ್‌ಕಕ್ ಅವರ ವಕ್ತಾರರೊಬ್ಬರು ಬುಧವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ.

ವಿಶ್ವಸಂಸ್ಥೆಯ ಮಹಾಸಭೆ ನಿರ್ಣಯವೊಂದರ ಆಧಾರದಲ್ಲಿ 2006ರಲ್ಲಿ ಮಾನವಹಕ್ಕುಗಳ ಮಂಡಳಿಯನ್ನು ಸ್ಥಾಪಿಸಲಾಗಿತ್ತು.

 ಮಂಡಳಿಯಿಂದ ಯಾರಾದರೂ ಸದಸ್ಯರು ಹೊರಬಂದರೆ ಏನು ಮಾಡಬೇಕು ಎನ್ನುವುದು ನಿರ್ಣಯದಲ್ಲಿಲ್ಲ ಎಂದು ಬ್ರೆಂಡನ್ ವಾರ್ಮ ಹೇಳಿದರು.

ಆದರೆ, ಮಂಡಳಿಯ 47 ಸ್ಥಾನಗಳನ್ನು ಭೌಗೋಳಿಕತೆಯ ಆಧಾರದಲ್ಲಿ ಭರ್ತಿಮಾಡಬೇಕು ಎನ್ನುವುದು ನಿರ್ಣಯದಲ್ಲಿದೆ. ಹಾಗಾಗಿ, ಅಮೆರಿಕ ತೆರವುಗೊಳಿಸಿದ ಸ್ಥಾನವನ್ನು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ನಡೆಯುವ ಚುನಾವಣೆಯ ಮೂಲಕ ‘ಪಶ್ಚಿಮ ಯುರೋಪ್ ಮತ್ತು ಇತರರು’ ಗುಂಪಿಗೆ ಸೇರಿದ ಓರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News