ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

Update: 2018-06-21 17:01 GMT

ಮೂಡುಬಿದಿರೆ, ಜೂ.21: ಪತಂಜಲಿ ಯೋಗ ಘಟಕ ಮೂಡುಬಿದ್ರೆಯ ವತಿಯಿಂದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ನಡೆಸಿದ ಘಟಕದ ಸದಸ್ಯ ರಾಘವೇಂದ್ರ ರಾವ್, ಸ್ವಸ್ಥ ಮತ್ತು ಸದೃಢ ಮನಸ್ಸಿಗೆ ಯೋಗವು ಪೂರಕ, ಮನಸ್ಸು, ದೇಹ, ಚಿಂತನೆ-ಸಾಧನೆಗಳ ಏಕೀಕರಣವನ್ನು ಯೋಗವು ಸಾಕಾರಗೊಳಿಸುತ್ತದೆ ಎಂದು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಬದುಕಿನ ಸೂತ್ರಕ್ಕೆ ಯೋಗದ ಪಾತ್ರ ಅಪಾರ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಅತೀವ ಆಸಕ್ತಿಯಿಂದ ಪಾಲ್ಗೊಂಡರು. ಪತಂಜಲಿ ಯೋಗ ಘಟಕದ ಸದಸ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಗುರುಪ್ರಸಾದ್ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News