×
Ad

ಕಲ್ಯಾಣಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Update: 2018-06-21 22:49 IST

ಕಲ್ಯಾಣಪುರ, ಜೂ.21: ಇಲ್ಲಿ ಮಿಲಾಗ್ರಿಸ್ ಕಾಲೇಜಿನಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎನ್ನೆಸ್ಸೆಸ್ ಹಾಗೂ ಎನ್‌ಸಿಸಿ ಘಟಕಗಳ ವತಿಯಿಂದ ಕಾಲೇಜಿನಲ್ಲಿ ಆಚರಿಸಿದ್ದು ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಪತಂಜಲಿ ಯೋಗ ಸಮಿತಿ ಉಡುಪಿ ಇದರ ಮಹಿಳಾ ಘಟಕದ ಅಧ್ಯಕ್ಷೆ ಲೀಲಾ ಎಸ್ ಅಮೀನ್, ಪದಾಧಿಕಾರಿಗಳಾದ ಜ್ಯೋತಿ, ಲಕ್ಷ್ಮೀ ಸುವರ್ಣ ಮತ್ತು ಸುಮೇಧಾ ಆಗಮಿಸಿ ಯೋಗ ತರಬೇತಿ ನಡೆಸಿಕೊಟ್ಟರು. ಎನ್ನೆಸ್ಸೆಸ್ ಸಂಯೋಜಕರಾದ ರವಿನಂದನ್ ಮತ್ತು ಅನುಪಮಾ ಜೋಗಿ ಹಾಗೂ ಎನ್‌ಸಿಸಿ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News