ಓಮ್ನಿ ಢಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ
ಮಂಗಳೂರು, ಜೂ.21: ನಗರದ ನಂತೂರು ತಾರೆತೋಟ ಬಳಿ ಬೈಕ್‌ಗೆ ಓಮ್ನಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಮರೋಳಿ ಬಜ್ಜೋಡಿಯ ನಿವಾಸಿ ಪ್ರವೀಣಕುಮಾರ್ ಗಾಯಗೊಂಡವರೆಂದು ಗುರುತಿಸಲಾಗಿದೆ. ಗಾಯಾಳು ಪ್ರವೀಣಕುಮಾರ್ ಕೆಪಿಟಿ ಸಪ್ತಗಿರಿ ಪೆಟ್ರೋಲ್ ಬಂಕ್‌ನಿಂದ ಮಧ್ಯಾಹ್ನ ಊಟಕ್ಕೆ ಮರೋಳಿ ಬಜ್ಜೋಡಿಯ ತನ್ನ ಮನೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನಂತೂರು ಕಡೆಯಿಂದ ಚಲಾಯಿಸಿಕೊಂಡು ಬಂದ ಓಮ್ನಿ ಕಾರು ಚಾಲಕ, ನಂತೂರು ತಾರೆತೋಟ ಬಳಿಯ ಸಂದೇಶ ಕಲಾಮಂದಿರ ಸಮೀಪದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಗಾಯಾಳು ಪ್ರವೀಣ ಕುಮಾರ್ ಬೈಕ್ ಸಮೇತ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಓಮ್ನಿ ಕಾರು ಚಾಲಕನ ನಿರ್ಲಕ್ಷತನವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಓಮ್ನಿ ಚಾಲಕ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ. ಕೂಡಲೇ ಗಾಯಾಳುವನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಗಾಯಾಳುವಿನ ಸಹೋದರ ದಿನೇಶ್‌ಕುಮಾರ್ ನೀಡಿದ ದೂರಿನಂತೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.