ಸಿಡಿಲು ಬಡಿದು ಹಾನಿಗೀಡಾದ ಮನೆಗೆ ಸಚಿವ ಯು.ಟಿ.ಖಾದರ್ ಭೇಟಿ
Update: 2018-06-21 23:21 IST
ಕೊಣಾಜೆ, ಜೂ. 21: ಪಜೀರು ಗ್ರಾಮದ ಬೆಂಗೋಡಿಪದವಿನಲ್ಲಿ ಸಿಡಿಲು ಬಡಿದು ಹಾನಿಗೀಡಾದ ಸದಾಶಿವ ಶೆಟ್ಟಿ ಅವರ ಮನೆಗೆ ವಸತಿ ಸಚಿವ ಯು.ಟಿ. ಖಾದರ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಮಂಗಳವಾರ ಮಧ್ಯಾಹ್ನ ಸದಾಶಿವ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದಿತ್ತು. ಸಿಡಿಲ ಅಬ್ಬರಕ್ಕೆ ಮನೆಯು ಬಿರುಕುಬಿಟ್ಟಿತ್ತು ಮಾತ್ರವಲ್ಲದೆ ಮನೆಯೊಳಗಿನ ಇಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಹೋಗಿದ್ದವು. ಗುರುವಾರ ಭೇಟಿ ನೀಡಿದ ಸಚಿವರು ಶೀಘ್ರದಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಚಿವರ ಜೊತೆಯಲ್ಲಿ ಪಜೀರು ಗ್ರಾಮ ಪಂ. ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಬಂಟ್ವಾಳ ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.