ಜೂ.24: ಕೆಥೊಲಿಕ್ ಸಭಾ ಸಹಮಿಲನ ಕಾರ್ಯಕ್ರಮ
ಉಡುಪಿ, ಜೂ.22: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮವು ‘ಸಮಾಜಮುಖಿ ಕೆಥೊಲಿಕ್ ಸಭಾ’ ಎಂಬ ಧ್ಯೇಯವಾಕ್ಯದೊಂದಿಗೆ ಕಲ್ಯಾಣಪುರದ ಮಿಲಾಗ್ರಿಸ್ ಟ್ರೈ ಸೆಂಟಿ ನರಿ ಸಭಾಂಗಣದಲ್ಲಿ ಜೂ.24ರಂದು ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಲಿದ್ದು, ಪ್ರಮುಖ ಭಾಷಣಕಾರ ರಾಗಿ ಮಾಜಿ ಕೇಂದ್ರಿಯ ಅಧ್ಯಕ್ಷ ಎಲ್.ರೊಯ್ ಕಿರಣ್ ಕ್ರಾಸ್ತಾ ಭಾಗವಹಿಸ ಲಿದ್ದಾರೆ. ಅಲ್ಫೋನ್ಸ್ ಡಿಸೋಜಾ ಬ್ರಹ್ಮಾವರ ಇವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಿಮಾಚಲ ಪ್ರದೇಶ ರಾಜ್ಯ ಸರಕಾರದ ಅಂಚೆ ಚೀಟಿ ಗೌರವಕ್ಕೆ ಪಾತ್ರರಾದ ಸಿಸ್ಟರ್ ಜೆಸಿಂತಾ ನೊರೊನ್ಹಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮರ್ವಿನ್ ಡಿಸೋಜ, ಸಂದೇಶ ಪ್ರಶಸ್ತಿ ಪುರಸ್ಕೃತ ವಿಲ್ಸನ್ ಒಲಿವೇರಾ, ರಾಷ್ಟ್ರೀಯ ಶ್ರೇಷ್ಠ ಅಂಗನವಾಡಿ ಪ್ರಶಸ್ತಿ ಪುರಸ್ಕೃತ ಡೆಲ್ಫಿನ್ ಡಿಸೋಜ ಅವರನ್ನು ಸನ್ಮಾನಿಸಲಾಗು ವುದು ಎಂದು ನಿರ್ಗಮನ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮತ್ತು ನೂತನ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.