ಇಸ್ಲಾಮೀನಲ್ಲಿ ಪ್ರತ್ಯೇಕ ಸಂಸ್ಕೃತಿ ಇಲ್ಲ: ಶರ್ಫುದ್ದೀನ್
ಉಡುಪಿ, ಜೂ.22: ಇಸ್ಲಾಮಿನಲ್ಲಿ ಡ್ರೆಸ್‌ಕೋಡ್ ಅಥವಾ ಪ್ರತ್ಯೇಕ ಸಂಸ್ಕೃತಿ ಎಂಬುದಿಲ್ಲ. ಯಾವುದೇ ಪ್ರದೇಶದ ಸಂಸ್ಕತಿಯಲ್ಲಿ ಪ್ರಚಲಿತವಿರುವ ವಸ್ತ್ರ ಧಾರಣೆಗೆ ಮೂಲಭೂತವಾಗಿ ಬೇಕಾಗಿರುವ ಸಭ್ಯತೆಯನ್ನಷ್ಟೇ ಇಸ್ಲಾಮ್ ಬಯ ಸುತ್ತದೆ. ತನ್ನ ಪ್ರತ್ಯೇಕ ಸಂಸ್ಕೃತಿಯನ್ನು ಹೇರುವುದಿಲ್ಲ. ಆದರೆ ಸಂಸ್ಕಾರ ಕಲಿಸುತ್ತದೆ ಎಂದು ಇಸ್ಲಾಮಿ ಉಪನ್ಯಾಸಕ ಬಿ.ಎಸ್.ಶರ್ಫುದ್ದೀನ್ ಹೇಳಿದ್ದಾರೆ.
ಉಡುಪಿಯ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಉಡುಪಿ ಜಾಮೀಯ ಮಸೀದಿಯಲ್ಲಿ ಬುಧವಾರ ಏರ್ಪಡಿಸಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನಿಮ್ಮನ್ನು ಸುಮಧ್ಯ ಸಮುದಾಯವಾಗಿ ಮಾಡಿದ್ದೇವೆ ಎಂದು ಕುರಾನ ಮುಸ್ಲಿಮರಿಗೆ ಸಂಭೋದಿಸಿದೆ. ಮಧ್ಯಮ ರೀತಿಯಲ್ಲಿ ಜೀವಿಸಿರೆಂದು ಇಸ್ಲಾಮ ವಿವಿಧ ಸಂದರ್ಭಗಳಲ್ಲಿ ಕಲಿಸುತ್ತದೆ. ತುಂಬಾ ಸರಳ ಮತ್ತು ಸುಲಭವಾಗಿರುವ ಇಸ್ಲಾಮ ಶಿಕ್ಷಣದಂತೆ ಲೋಕದ ಯಾವ ಭಾಗದಲ್ಲೂ ಬಾಳಿ ಯಶಸ್ವಿಯಾಗ ಬಹುದಾಗಿದೆ ಎಂದರು.
ಆರಾಧನೆಗಳಿಂದ ದೇವ ಸಾಮೀಪ್ಯಗೊಳ್ಳುವುದು. ಅದರ ಫಲವಾಗಿ ಸತ್ಯ ಸಂದ ಜೀವನದಿಂದ ಸಮಾಜವನ್ನು ನಿರ್ಮಿಸಲಾಗುವುದು. ಇದರಲ್ಲಿ ತೀವ್ರತೆಗೆ ಎಲ್ಲೂ ಅವಕಾಶವಿಲ್ಲ. ಪ್ರವಾದಿ ಮುಹಮ್ಮದರು ತನ್ನ ಅನುಯಾಯಿಗಳಿಗೆ ಜನರಿಗೆ ಸದಾ ಸುಲಭಗೊಳಿಸಿ ತೋರಿಸಿರಿ, ಕ್ಲಿಷ್ಟತೆ ಇದರಲ್ಲಿ ಇಲ್ಲವೆಂದು ಉಪದೇಶಿಸುತ್ತಿದ್ದರು ಎಂದು ಅವರು ತಿಳಿಸಿದರು.
ಕುರಾನ್ ಎಷ್ಟು ಹೇಳುತ್ತದೋ ಅಷ್ಟನ್ನೇ ತಿಳಿಸಿ, ಅತಿಶಯೋಕ್ತಿ ಬೇಡ. ಪ್ರವಾದಿಯವರು ಸುವಾರ್ತೆ ನೀಡುತ್ತಿದ್ದರು. ದ್ವೇಶಿಸಲು ಕಾರಣವಾಗದಿರಿ ಎನ್ನುತ್ತಿದ್ದರು. ತೀವ್ರತೆ ತಂದರೆ ಅಂತಿಮವಾಗಿ ಅದು ಸೋಲುವುದು. ಅರಬ ರಲ್ಲಿನ ಈಗಿನ ವಸ್ತ್ರಧಾರಣೆಯೂ ಇಸ್ಲಾಮಿಗೆ ಮುಂಚಿನದ್ದೇ ಆಗಿದೆ ಎಂದು ಅವರು ಹೇಳಿದರು.